Job Description: * ವಿಶ್ವಸಂಸ್ಥೆ ಮತ್ತು ಆಫ್ರಿಕನ್ ಯೂನಿಯನ್ ನೀಡಿರುವ ಮಾಹಿತಿ ಪ್ರಕಾರ ಪಶ್ಚಿಮ ಆಫ್ರಿಕದ ದೇಶ ಮಾಲಿಯ ಸೈನಿಕರು ಮಧ್ಯಂತರ ಸರಕಾರದ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬಂಧಿಸಿರುವುದಾಗಿ ತಿಳಿಸಲಾಗಿದೆ. 9 ತಿಂಗಳ ಹಿಂದೆ ನಡೆದ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿರುವ ಸೇನೆಯ ಇಬ್ಬರು ಸದಸ್ಯರನ್ನು ಸರ್ಕಾರದ ಪುನರ್ರಚನೆಯ ಸಮಯದಲ್ಲಿ ಕೈ ಬಿಡಲಾಗಿತ್ತು ಇದಾದ ಕೆಲವೇ ಗಂಟೆಗಳಲ್ಲಿ ದಂಗೆಕೋರ ಮಿಲಿಟರಿ ಪಡೆಯು ಮಾಲಿಯ ಅಧ್ಯಕ್ಷ ಹಾಗೂ ಪ್ರಧಾನಿಯನ್ನು ಬಂಧನಕ್ಕೆ ಒಳಪಡಿಸಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಬಂಧನಕ್ಕೆ ಒಳಪಡಿಸಿದ ಮಾಲಿ ಅಧ್ಯಕ್ಷ ಬಹ್ ಎನ್ಡಾವ್ ಮತ್ತು ಪ್ರಧಾನಿಯಾಗಿರುವ ಮೊಕ್ಟರ್ ಓವಾನೆ ಅವರನ್ನು ಕಾಟಿಯ ಮಿಲಿಟರಿ ಪ್ರಧಾನ ಕಚೇರಿಗೆ ಕರೆದು ಕೊಂಡುಹೋಗಲಾಗಿದೆ, ಪ್ರಸ್ತುತ ಇದರ ವಿರುದ್ಧ ದಂಗೆ ಎದ್ದಿರುವ ಮಿಲಿಟರಿಯ ಈ ಕ್ರಮವನ್ನು ಖಂಡಿಸಿರುವ ಆಫ್ರಿಕನ್ ಒಕ್ಕೂಟ ಹಾಗೂ ವಿಶ್ವಸಂಸ್ಥೆಯು ಇಬ್ಬರನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿವೆ.