Job Description: * ಕೇಂದ್ರ ಕ್ರೀಡಾ ಇಲಾಖೆಯು ಕರ್ನಾಟಕ ಹಾಗೂ ಇತರೆ 7 ರಾಜ್ಯಗಳಲ್ಲಿ ಒಟ್ಟು 143 ಖೇಲೊ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ, ಈ ಕೇಂದ್ರಗಳಿಗಾಗಿ ಸುಮಾರು 14.30 ಕೋಟಿ ವೆಚ್ಚ ತಗುಲಲಿದೆ ಎಂದು ಕೇಂದ್ರ ಕ್ರೀಡಾ ಇಲಾಖೆ ತಿಳಿಸಿದೆ. * ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲೆಗಳಲ್ಲೂ ಖೇಲೊ ಇಂಡಿಯಾ ಕೇಂದ್ರಗಳು ಸ್ಥಾಪನೆಯಾಗಲಿವೆ, ಪ್ರಸ್ತುತ ರಾಜ್ಯಗಲ್ಲಿ ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದಾಗಿ ಈ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ, ಮಹಾರಾಷ್ಟ್ರ, ಮಿಜೋರಾಂ, ಗೋವಾ, ಮಧ್ಯಪ್ರದೇಶ, ಅರುಣಾಚಲಪ್ರದೇಶ ಮತ್ತು ಮಣಿಪುರ ಈ ರಾಜ್ಯಗಳು ಖೇಲೊ ಇಂಡಿಯಾ ಕೇಂದ್ರಗಳುನ್ನು ಸ್ಥಾಪನೆ ಮಾಡಲು ಆಯ್ಕೆಯಾಗಿವೆ, ಈ ಎಲ್ಲ ರಾಜ್ಯಗಳ ಪ್ರತಿ ಕೇಂದ್ರಗಳಲ್ಲಿ ಒಂದು ಕ್ರೀಡೆಯಲ್ಲಿ ವಿಶೇಷವಾಗಿ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಇಲಾಖೆಯು ತಿಳಿಸಿದೆ. * ಈ ಖೇಲೊ ಇಂಡಿಯಾ ಕೇಂದ್ರಗಳುನ್ನು ಸ್ಥಾಪನೆಯಿಂದಾಗಿ 2028ರ ಒಲಿಂಪಿಕ್ಸ್'ನ ಕ್ರಿಡಾ ಕ್ಷೇತ್ರದಲ್ಲಿ ಭಾರತವು ಪ್ರಮುಖವಾಗಿ 10 ರಾಷ್ಟ್ರಗಳ ಪಟ್ಟಿಯಲ್ಲಿ ಇರಬೇಕೆಂಬುವದು ಭಾರತ ಸರ್ಕಾರದ ಉದ್ದೇಶವಾಗಿದೆ, ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ. * ಈ ಹಿಂದೆ 2020ರ ಜೂನ್ನಲ್ಲಿ ಕ್ರೀಡಾ ಇಲಾಖೆಯು ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ ಒಂದು ಖೇಲೊ ಇಂಡಿಯಾ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶವಿದೆ ಮುಂದಿನ 4ವರ್ಷಗಳಲ್ಲಿ 1000 ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವದು ಎಂದು ತಿಳಿಸಿತ್ತು. * ಹಲವು ರಾಜ್ಯಗಳಲ್ಲಿ ಇದೀಗ 217 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ, ಈಶಾನ್ಯ ರಾಜ್ಯಗಳಾಗಿರುವ ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದ್ವೀಪ, ಲಡಾಖ್ನ ಪ್ರತಿ ಜಿಲ್ಲೆಯಲ್ಲಿ ಎರಡು ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಕ್ರೀಡಾ ಇಲಾಖೆಯು ತಿಳಿಸಿದೆ. * ಸ್ಥಾಪನೆಯಾಗುತ್ತಿರುವ ಪ್ರತಿಯೊಂದು ಖೇಲೋ ಇಂಡಿಯಾ ಕೇಂದ್ರಗಳಲ್ಲಿ ಕ್ರೀಡೆಗಳಲ್ಲಿ ಸಾಧನೆ ಮಾಡಿರುವವರನ್ನು ಕೋಚ್ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಖೇಲೊ ಇಂಡಿಯಾ ಯೋಜನೆಯ ಹಿರಿಯ ನಿರ್ದೇಶಕ ಸತ್ಯನಾರಾಯಣ ಮೀನಾ ಅವರು ತಿಳಿಸಿದ್ದಾರೆ.