Job Description: * ಪ್ರಸ್ತುತ ಡೇವಿಡ್ ಬಾರ್ನಿಯಾ ಅವರನ್ನು ಇಸ್ರೇಲ್'ನ ಮೊಸಾದ್ ಗೂಢಚರ್ಯೆ ಏಜೆನ್ಸಿಯ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. * 56 ವರ್ಷ ವಯಸ್ಸಿನ ಡೇವಿಡ್ ಬಾರ್ನಿಯಾ ಅವರು 2 ವರ್ಷಗಳಿಂದ ಇಸ್ರೇಲ್'ನ ಮೊಸಾದ್ ಗೂಢಚರ್ಯೆ ಏಜೆನ್ಸಿಯ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಡೇವಿಡ್ ಬಾರ್ನಿಯಾ ಅವರು ಇರಾನ್ ಹಾಗೂ ಲೆಬನಾನ್ನ ಹಿಜ್ಬೊಲ್ಲಾ ಉಗ್ರಗಾಮಿ ಗುಂಪಿನ ವಿರುದ್ಧ ಕಾರ್ಯ ನಿರ್ವಹಿಸುವ ಏಜೆಂಟರನ್ನು ನೇಮಕ ಮಾಡಿಕೊಳ್ಳುವಲ್ಲಿ ಉತ್ತಮವಾದ ಅನುಭವನ್ನು ಹೊಂದಿದ್ದಾರೆ ಎಂದು ಇಸ್ರೇಲ್'ನ ಸುದ್ದಿವಾಹಿನಿಗಳು ವರದಿಯನ್ನು ನೀಡಿವೆ. * ಆದಾಗ್ಯೂ, ಅಟಾರ್ನಿ ಜನರಲ್ ಅವಿಚೈ ಮ್ಯಾಂಡೆಲ್ಬ್ಲಿಟ್ ಅವರು ಕೆಲವು ತಿಂಗಳಿನ ಹಿಂದೆ ಇಸ್ರೇಲ್'ನ ಮೊಸಾದ್ ಮುಖ್ಯಸ್ಥರ ನೇಮಕ ಮಾಡುವದನ್ನು ನಿಲ್ಲಿಸಿದ್ದರು. * ಡೇವಿಡ್ ಬಾರ್ನಿಯಾ ಅವರು 1996ರಲ್ಲಿ ಕೇಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ ಇವರು ಮೊಸಾದ್'ಗೆ ಸೇರಿದವರಾಗಿದ್ದರೆ, ಮೊಸಾದ್ನ ಪ್ರಮುಖ ಗುರಿಗಳಾಗಿರುವ ಇರಾನ್ ಮತ್ತು ಹಿಜ್ಬುಲ್ಲಾ ವಿರುದ್ಧ ಆಪರೇಟಿವ್ಗಳನ್ನು ಸೇರ್ಪಡೆಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಇಸ್ರೇಲ್'ನ ಹಾರೆಟ್ಜ್ ಪತ್ರಿಕೆಯು ಮಾಹಿತಿಯನ್ನು ತಿಳಿಸಿದೆ.