Job Description: * ಪ್ರಸ್ತುತ ಭಾರತದಲ್ಲಿನ ಕೋವಿಡ್-19 ಪರಿಸ್ಥಿತಿ ಸುಧಾರಿಸಲು ಭಾರತೀಯ ನೌಕಾಸೇನೆಯ ಯುದ್ಧ ನೌಕೆ INS ಶಾರ್ದೂಲ್ ನೌಕೆಯು ಇದೀಗ ಕುವೈತ್ನಿಂದ ಮತ್ತೆ ಆಕ್ಸಿಜನ್ ಹಾಗೂ ವ್ಯದ್ಯಕೀಯ ಉಪಕರಣಗಳನ್ನು ಹೊತ್ತು ನವ-ಮಂಗಳೂರು ಬಂದರಿಗೆ ಬಂದು ತಲುಪಿದೆ ಎಂದು ADGP ಪ್ರತಾಪ್ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದರು. * ಭಾರತೀಯ ನೌಕಾ ಸೇನೆಯ INS ಶಾರ್ದೂಲ್ ಸುಮಾರು 190 ಮೆಟ್ರಿಕ್ ಟನ್(MT)ಆಕ್ಸಿಜನ್ ಹೊತ್ತು ತಂದಿದೆ, ಈ ನೌಕೆಯಲ್ಲಿ 2ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ ಮತ್ತು 2 ಸೆಮಿ ಲಿಕ್ವಿಡ್, 1200 ಆಕ್ಸಿಜನ್ ಸಿಲಿಂಡರ್ಗಳು ಇದ್ದವು ಎಂದು ತಿಳಿದು ಬಂದಿದೆ, ಭಾರತಕ್ಕೆ ಕುವೈತ್ ಮತ್ತು ಫುಝಿ ದೇಶದಿಂದ ಆಕ್ಸಿಜನ್ ನೆರವು ನೀಡಿವೆ. * ಅರಬ್ ರಾಷ್ಟ್ರಗಳಿಂದ ಸತತವಾಗಿ ಮಂಗಳೂರಿಗೆ ಬಂದಿರುವ 5ನೇ ಭಾರತೀಯ ನೌಕಾ ಸೇನೆಯ ಯುದ್ಧ ನೌಕೆ ಇದಾಗಿದೆ, ಈ ರೀತಿ ಸಂಗ್ರಹಿಸಿರುವ ಆಕ್ಸಿಜನ್ ಸಿಲಿಂಡರ್ಗಳನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅವಶ್ಯಕತೆ ಇರುವ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.