Job Description: * ಹಿರಿಯ ಸಾಹಿತಿ, ಬ್ಯಾರಿ ಸಂಶೋಧಕ ಪ್ರೊ. ಬಿ.ಎಂ. ಇಚ್ಲಗೊಂಡ ಅವರು ತಮ್ಮ 84ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಪ್ರೊ. ಬಿ.ಎಂ. ಇಚ್ಲಗೊಂಡ ಅವರು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ನಡೆಸಿದ ಅಧ್ಯಯನಕ್ಕೆ 2011ರಲ್ಲಿ ಉಡುಪಿಯಲ್ಲಿ ನಡೆದ 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು, ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. * ಪ್ರೊ. ಬಿ.ಎಂ. ಇಚ್ಲಗೊಂಡ ಅವರಿಗೆ 1975ರಲ್ಲಿ ದಿವ್ಯದರ್ಶನ ಕವ್ಯಾನುವಾದಕ್ಕೆ ರಾಷ್ಟ್ರಪಶಸ್ತಿ, ಸಾಹಿತ್ಯ ಸೇವಾ ಸನ್ಮಾನವು ಮೂಡುಬಿದಿರೆಯ ರೋಟರಿ ಕ್ಲಬ್'ನ ವತಿಯಿಂದ ನೆರವೇರಿತು, ಹಾಗೂ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದದಲ್ಲಿ ಬ್ಯಾರಿ ಸಾಹಿತ್ಯ ಸನ್ಮಾನವು ಇವರಿಗೆ ಲಭಿಸಿತ್ತು.