Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಕೋವಿಡ್-19 ಪ್ರತಿಕಾಯಗಳನ್ನು (ಆಯಂಟಿಬಾಡಿ) ಪತ್ತೆ ಹಚ್ಚುವ ಕಿಟ್ ಅನ್ನು ಅಭಿವೃದ್ಧಿ ಪಡಿಸಿದೆ, ಈ ಕೋವಿಡ್-19 ಪ್ರತಿಕಾಯಗಳ ಕಿಟ್ ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯವು ಮಾಹಿತಿಯನ್ನು ನೀಡಿದೆ. * ಪ್ರಸ್ತುತ DRDO ಅಭಿವೃದ್ಧಿಪಡಿಸಿದ ಈ ಕಿಟ್'ಗೆ ಡಿಪ್ಕೋವ್ಯಾನ್ ಎಂದು ಹೆಸರಿಸಲಾಗಿದೆ, ಈ ಕಿಟ್'ನ್ನು ನವದೆಹಲಿ ಮೂಲದ ವ್ಯಾನ್ಗಾರ್ಡ್ ಡಯಾಗ್ನೋಸ್ಟಿಕ್ಸ್ ಪ್ರೈ ಲಿ. ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದ್ದಾರೆ. * ಈ ಕಿಟ್ನ ಜೀವಿತಾ ಅವಧಿ (ಶೆಲ್ಫ್ ಲೈಫ್) 18 ತಿಂಗಳವರೆಗೆ ಇರಲಿದೆ, ಈ ಕಿಟ್'ನಿಂದ ನ್ಯೂಕ್ಲಿಯೊಕ್ಯಾಪ್ಸಿಡ್ ಸಾರ್ಸ್-ಕೋವಿನ್-2 ಪ್ರೊಟೀನ್ಗಳನ್ನು ಪತ್ತೆ ಮಾಡಲು ಸಹಾಯಕಾರಿಯಾಗಲಿದೆ, ಈ ಕಿಟ್'ನ್ನು ಜೂನ್ ತಿಂಗಳಿನ ಮೊದಲ ವಾರದಲ್ಲಿ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯವು ಪ್ರಕಟಿಸಿದೆ.