Job Description: * ಹಿರಿಯ ಸಾಹಿತಿಯಾಗಿರುವ ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಚಿತ್ರವು ಈ ಹಿಂದೆ ಲಾಸ್ ಏಂಜಲೀಸ್ ಇಂಡಿಪೆಂಡೆಂಟ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು, ಸದ್ಯ ಇದೀಗ ಲಾಸ್ ಏಂಜಲೀಸ್ನಲ್ಲೇ ನಡೆಯುತ್ತಿರುವ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. * ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಚಿತ್ರವು ಇಲ್ಲಿಯವರೆಗೆ ಒಟ್ಟು 10 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ, ಈ ಚಿತ್ರದ ನಟಿ ಹರಿಪ್ರಿಯಾ ಅವರಿಗೆ 2 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. * ಈ ಅಮೃತಮತಿ ಚಿತ್ರಕ್ಕೆ ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಎಂಬ ಪ್ರಶಸ್ತಿ ಲಭಿಸಿದೆ, ಮತ್ತು 11ನೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ವಿಶೇಷ ಚಿತ್ರ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. * ಈ ಅಮೃತಮತಿ ಚಿತ್ರವು 13ನೇ ಶತಮಾನದ ಕನ್ನಡ ಕವಿ ಜನ್ನನ ಯಶೋಧರ ಚರಿತೆಯನ್ನು ಆಧರಿಸಿದ ಕಾವ್ಯವಾಗಿದೆ, ಈ ಚಿತ್ರದಲ್ಲಿ ನಟಿ ಹರಿಪ್ರಿಯಾ, ನಟ ಕಿಶೋರ್, ಸುಂದರ್ರಾಜ್, ವತ್ಸಲಾ ಮೋಹನ್ ಮುಂತಾದ ವ್ಯಕ್ತಿಗಳು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.