Job Description: * ಪ್ರಸ್ತುತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸಾರ್ವಜನಿಕರ ಮಾಹಿತಿಗಾಗಿ ತಾವು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್'ನ ವಿವರಗಳ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. * ಪ್ರಸ್ತುತ 2020ರಲ್ಲಿ ಅಮೇರಿಕದ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಅವರ ಆದಾಯ ₹ 7.30 ಕೋಟಿಗಿಂತ ಹೆಚ್ಚು ಇದೆ, ಮತ್ತು ಅಧ್ಯಕ್ಷ ಜೋ ಬೈಡನ್ ಅವರ ಆದಾಯ ₹ 4.43 ಕೋಟಿ ಇದೆ ಎಂದು ದಾಖಲೆಗಳು ನೀಡಿರುವ ಮಾಹಿತಿ ಪ್ರಕಾರ ತಿಳಿದು ಬಂದಿದೆ, ಪ್ರಸ್ತುತ ಅಧ್ಯಕ್ಷ ಜೋ ಬೈಡನ್ ಅವರ ಆದಾಯಕ್ಕಿಂತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಆದಾಯ ಹೆಚ್ಚಿದೆ ಎಂದು ಶ್ವೇತಭವನವು ಮಾಹಿತಿ ನೀಡಿದೆ.