Job Description: * ಕೊರೊನಾ ವೈರಸ್ ವಿರುದ್ಧ ಹೋರಾಡುವ ಸ್ಪುಟ್ನಿಕ್-ವಿ ಲಸಿಕೆಯನ್ನು ಕರ್ನಾಟಕ ರಾಜ್ಯದ ಧಾರವಾಡದಲ್ಲಿ ತಯಾರಿಸಲು ಡಾ.ರೆಡ್ಡಿ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ರಾಯಚೂರು ಮೂಲದ ಶಿಲ್ಪಾ ಮೆಡಿಕೇರ್ ಪರಸ್ಪರ ಒಪ್ಪಿ 3ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿವೆ. * ಶಿಲ್ಪಾ ಮೆಡಿಕೇರ್ನ ಅಂಗಸಂಸ್ಥೆಯಾಗಿರುವ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್ ಪ್ರಸ್ತುತ ಧಾರವಾಡದಲ್ಲಿನ ಸಮಗ್ರ ಜೈವಿಕ ವಿಜ್ಞಾನ ಆರ್ & ಡಿ(Research & Development) ಕಮ್ ಉತ್ಪಾದನಾ ಕೇಂದ್ರದಿಂದ ಲಸಿಕೆಯನ್ನು ಉತ್ಪಾದನೆ ಮಾಡಲು ಡಾ.ರೆಡ್ಡಿ ಲ್ಯಾಬೊರೇಟರೀಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ, ಪ್ರಸ್ತುತ ಈ ಸಂಸ್ಥೆಯು ಮೊದಲ 12 ತಿಂಗಳಲ್ಲಿ 50 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಶಿಲ್ಪಾ ಮೆಡಿಕೇರ್ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ, ಮತ್ತು ಲಸಿಕೆಯನ್ನು ಮಾರುಕಟ್ಟೆ ಪ್ರದೇಶಗಳಲ್ಲಿ ವಿತರಣೆ ಹಾಗೂ ಮಾರಾಟ ಮಾಡುವ ಜವಾಬ್ದಾರಿಯನ್ನು ಹೊಂದಿದೆ * ಶಿಲ್ಪಾ ಮೆಡಿಕೇರ್ ರಷ್ಯಾದೊಂದಿಗೆ ನೇರ ಹೂಡಿಕೆ ಮಾಡಿಕೊಂಡಿದೆ ಮತ್ತು ಲಸಿಕೆ ತಯಾರಿಸಲು ಭಾರತೀಯ 5 ಔಷಧಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ, ಈಗಾಗಲೇ ರಷ್ಯಾದಿಂದ ಆಮದು ಮಾಡಿಕೊಂಡಿರುವ ಕೋವಿಡ್-19 ಲಸಿಕೆ ಸ್ಪುಟ್ನಿಕ್-ವಿ ಲಸಿಕೆಯ ಬೆಲೆ ಪ್ರತಿ ಡೋಸ್ಗೆ 995ರೂ. (GSTಯೊಂದಿಗೆ) ಗಳಂತೆ ಪ್ರಸ್ತುತ 60,000 ಡೋಸ್ ಲಸಿಕೆಗಳು ಹೈದರಾಬಾದ್ಗೆ ಬಂದು ತಲುಪಿವೆ ಎಂದು ತಳಿದು ಬಂದಿದೆ.