Job Description: * 2020ರ ವಿಶ್ವ ಸುಂದರಿಯಾಗಿ ಮೆಕ್ಸಿಕೋದ ಆಯಂಡ್ರಿಯಾ ಮೆಝಾ ಅವರು ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ, ಎರಡನೇ ಸ್ಥಾನಕ್ಕೆ ಬ್ರೆಜಿಲ್ನ ಜ್ಯೂಲಿಯಾ ಗಾಮ ಅವರು ಮತ್ತು ಮೂರನೇ ಸ್ಥಾನಕ್ಕೆ ಪೆರು ದೇಶದ ಜೆನಿಕ್ ಮೆಸಿಟಾ ಅವರು ಆಯ್ಕೆಯಾಗಿದ್ದಾರೆ. * ಮಿಸ್ ಯೂನಿವರ್ಸ್ 2020 ಮಿಸ್ ಯೂನಿವರ್ಸ್ ಸ್ಪರ್ಧೆಯ 69 ನೇ ಆವೃತ್ತಿಯಾಗಿದೆ, ಈ ಸ್ಪರ್ಧೆಯನ್ನು 2021ರ ಮೇ.16ರಂದು ಯುನೈಟೆಡ್ ಸ್ಟೇಟ್ಸ್ನ ಫ್ಲೋರಿಡಾದ ಹಾಲಿವುಡ್ನ ಸೆಮಿನೋಲ್ ಹಾರ್ಡ್ ರಾಕ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ನಡೆಸಲಾಯಿತು. * ಪ್ರಸ್ತುತ 69ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಒಟ್ಟಾರೆ 74 ದೇಶಗಳ ಸುಂದರಿಯರು ಭಾಗವಹಿಸಿದ್ದರು. * ಪ್ರಸ್ತುತ ವಿಶ್ವಸುಂದರಿ ಕಿರೀಟವನ್ನು ಆಯಂಡ್ರಿಯಾ ಮೆಝಾ ಅವರಿಗೆ 2019ರ ವಿಶ್ವಸುಂದರಿಯಾಗಿದ್ದ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು ತೊಡಿಸಿದರು. * ಪ್ರಸ್ತುತ ಉಡುಪಿಯ ಉದ್ಯಾವರ ಮೂಲದ ಅಡ್ಲೆನ್ ಕ್ಯಾಸ್ಟೆಲಿನೊ ಅವರು 4ನೇ ಸ್ಥಾನ ಪಡೆದುಕೊಂಡಿದ್ದಾರೆ, ಇವರು ಭಾರತದ ಪರವಾಗಿ ಸ್ಪರ್ಧಿಸಿರುವ ಮಿಸ್ ಇಂಡಿಯಾ ಆಗಿದ್ದಾರೆ.