Job Description: * ಭಾರತೀಯ ರೈಲ್ವೆಯ ಇಲಾಖೆಯು ತನ್ನ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸಂಪರ್ಕಿಸಲು ದೂರದ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಕಲ್ಪಿಸುತ್ತಿದೆ, ಪ್ರಸ್ತುತ ಭಾರತೀಯ ರೈಲ್ವೆ ತನ್ನ 6,000ನೇ ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಿದೆ. * ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆಯು 2016ರ ಜನವರಿಯಲ್ಲಿ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮೊದಲನೇ ವೈ-ಫೈ ಸೌಲಭ್ಯ ಕಲ್ಪಿಸಿತ್ತು ಅಲ್ಲಿಂದ ಭಾರತೀಯ ರೈಲ್ವೆ ತನ್ನ ನಿಲ್ದಾಣಗಳಿಗೆ ವೈ-ಫೈ ಸೌಲಭ್ಯ ನೀಡುವ ಕಾರ್ಯ ಪ್ರಾರಂಭಿಸಿತ್ತು. * ಈ ಹಿಂದೆ ಭಾರತೀಯ ರೈಲ್ವೆ ಇಲಾಖೆಯು ಪೂರ್ವ ಬಂಗಾಳದ ಮಿಡ್ನಾಪುರದ ರೈಲ್ವೆ ನಿಲ್ದಾಣಕ್ಕೆ ವೈ-ಫೈ ನೀಡಿತ್ತು, ಇದು 5000ನೇ ರೈಲ್ವೆ ನಿಲ್ದಾಣವಾಗಿತ್ತು, ಇದೀಗ ರೈಲ್ವೆ ಇಲಾಖೆಯು ಜಾರ್ಖಂಡ್ನ ಪೂರ್ವ ಕೇಂದ್ರೀಯ ರೈಲ್ವೆಯ ಧನ್ ಬಾದ್ ವಿಭಾಗದ ಹಝಾರಿಬಾದ್'ನಲ್ಲಿ ರೈಲ್ವೆ ನಿಲ್ದಾಣಕ್ಕೆ ವೈ-ಫೈ ಸೌಲಭ್ಯ ಕಲ್ಪಿಸಿದೆ ಇದು 6000ನೇ ರೈಲ್ವೆ ನಿಲ್ದಾಣವಾಗಿದೆ. * ಭಾರತ ಸರ್ಕಾರವು ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ನೀಡುವದರ ಮೂಲಕ ಡಿಜಿಟಲ್ ಇಂಡಿಯಾದ ನಿರೀಕ್ಷೆಗಳಿಗೆ ಪೂರಕವಾಗುತ್ತಿದೆ, ಇದರ ಜೊತೆಗೆ ಗ್ರಾಮೀಣ ಮತ್ತು ನಗರದ ಜನಗಳ ಮಧ್ಯ ಇರುವ ನಡುವೆ ಡಿಜಿಟಲ್ ಅಂತರವನ್ನು ಕಡಿಮೆಗೊಳಿಸಲು ಮತ್ತು ಗ್ರಾಮೀಣ ಪ್ರದೇಶಗಳನ್ನು ಡಿಜಿಟಲೀಕರಣ ಮಾಡುವ ಉದ್ದೇಶವನ್ನು ಹೊಂದಿದೆ. * ಪ್ರಸ್ತುತ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ನೀಡುವದರಿಂದ ರೈಲ್ವೆ ಇಲಾಖೆಗೆ ಯಾವುದೇ ತರಹದ ನಷ್ಟ ಉಂಟಾಗುವದಿಲ್ಲ, ಈ ವೈ-ಪೈ ಸೌಲಭ್ಯವನ್ನು ರೈಲ್ವೆ ಸಚಿವಾಲಯದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ರೈಲ್ ಟೆಲ್'ನ ಮತ್ತು ಗೂಗಲ್, ಡಿಒಟಿ, ಪಿ.ಜಿ.ಸಿ.ಐ.ಎಲ್ ಮತ್ತು ಟಾಟಾ ಟ್ರಸ್ಟ್'ನ ಸಹಯೋಗದೊಂದಿಗೆ ಈ ಸೇವೆ ನೀಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ವಿವರಣೆಯನ್ನು ನೀಡಿದೆ.