Job Description: * ಇತ್ತೀಚಿಗೆ ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಶೀತದಿಂದಾಗಿ ತೌಕ್ತೆ ಚಂಡಮಾರುತ ಬಿಸಲು ಆರಂಭಿಸಿತ್ತು ಇದರಿಂದಾಗಿ ಕರ್ನಾಟಕದ ಮಂಗಳೂರು ಕಡಲ ತೀರದ ಕಲ್ಲುಬಂಡೆಯ ಸಮೀಪ ದೋಣಿಯಲ್ಲಿ ಸಿಲುಕಿ ಕೊಂಡಿತ್ತು, ಅದರಲ್ಲಿ 9 ಜನರು ಸಿಲುಕಿಕೊಂಡಿದ್ದರು, ಪ್ರಸ್ತುತ ಭಾರತೀಯ ನೌಕಾಪಡೆ ಸಿಬ್ಬಂದಿಯು ಶೌರ್ಯ ಕಾರ್ಯದಿಂದಾಗಿ ಅವರನ್ನುಯಶಸ್ವಿಯಾಗಿ ರಕ್ಷಣೆ ಮಾಡಿದರು. * ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮತ್ತು ಹಡಗಿನ ಸಹಾಯದಿಂದ ದೋಣಿಯಲ್ಲಿ ಸಿಲುಕಿ ಕೊಂಡಿರುವವರನ್ನು ಒಂದು ದಿನಪೂರ್ತಿ ಕಾರ್ಯಾಚರಣೆ ನಡೆಸಿ ರಕ್ಷೆಣೆ ಮಾಡಿದ್ದಾರೆ ಎಂದು ಕರ್ನಾಟಕ ಕರಾವಳಿ ಪಡೆಯ ಡಿಐಜಿ ಎಸ್. ಬಿ. ವೆಂಕಟೇಶ್ ಅವರು ಮಾಹಿತಿಯನ್ನು ನೀಡಿದ್ದಾರೆ. * ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಅರಬ್ಬೀ ಸಮುದ್ರದಲ್ಲಿನ ಟಗ್'ನಲ್ಲಿ ಸಿಲುಕಿ ಕೊಂಡಿದ್ದ ೯ ಜನ ಕಾರ್ಮಿಕರನ್ನು ರಕ್ಷಣೆ ಮಾಡಿರುವ, ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಗೆ ಅಭಿನಂದನೆಗಳನ್ನು ತಿಳಿಸಿದರು.