Job Description: * ಕೇಂದ್ರ ಸರ್ಕಾರ ಇಲ್ಲಿಯವರೆಗೆ ಒಟ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 20 ಕೋಟಿ ಲಸಿಕೆಗಳನ್ನು ಪೂರೈಕೆ ಮಾಡಿದೆ, ಅದರಲ್ಲಿ 2 ಕೋಟಿ ಲಸಿಕೆ ಬಳಕೆಯಾಗದೆ ಇನ್ನು ಉಳಿದಿದೆ ಎಂದು ಮಾಹಿತಿ ನೀಡಿದೆ, ಮುಂಬರುವ 3 ದಿನಗಳಲ್ಲಿ ಇನ್ನೂ 3 ಲಕ್ಷ ಲಸಿಕೆಗಳನ್ನೂ ನೀಡುವದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಕರ್ನಾಟಕಕ್ಕೆ 1.18 ಕೋಟಿ ಲಸಿಕೆ, ಮಹಾರಾಷ್ಟ್ರ 2 ಕೋಟಿ ಲಸಿಕೆ, ಉತ್ತರ ಪ್ರದೇಶ 1.74 ಕೋಟಿ, ಗುಜರಾತ್ 1.62 ಕೋಟಿ, ರಾಜಸ್ಥಾನ 1.60 ಕೋಟಿ, ಪಶ್ಚಿಮ ಬಂಗಾಳ 1.34 ಕೋಟಿ ಲಸಿಕೆ ಇನ್ನೂ ಹೀಗೆ ಹಲವು ರಾಜ್ಯಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. * ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತದ ಮಹಾನಗರಗಳು ಸೇರಿದಂತೆ ಒಟ್ಟಾರೆ 42 ವಲಯಗಳಿಗೆ ಪ್ರತಿ ದಿನಕ್ಕೆ 3 ಲಕ್ಷದಷ್ಟು ಲಸಿಕೆಗಳನ್ನು ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದೆ.