Job Description: * ಆಸ್ಟ್ರೇಲಿಯಾದಲ್ಲಿ ಇಲಿಗಳ ಜನಸಂಖ್ಯೆಯು ತೀವ್ರವಾಗಿ ಹೆಚ್ಚಾಗಿದೆ, ಈ ಇಲಿಗಳು ಕೃಷಿ ಮಾಡಲಾಗಿರುವ ಬೆಳೆ ಹಾಗೂ ಸಂಗ್ರಹಿಸಿದ ಆಹಾರ ಧಾನ್ಯಗಳಿಗೆ ವ್ಯಾಪಕ ಹಾನಿಯನ್ನು ಉಂಟು ಮಾಡುತ್ತಿವೆ, ಹೀಗಾಗಿ ಇದನ್ನು ಇಲಿ ಮಳೆ ಎಂದು ಕರೆಯಲಾಗುತ್ತದೆ. * ರೈತರು ಕೆಲವು ಸ್ಥಳಗಳಲ್ಲಿ ತಮ್ಮ ಸಾಯಿಲ್(ಮಣ್ಣು) ಸ್ವಚ ಗೊಳಿಸುತ್ತಿರುವುದರಿಂದ ಇಲಿಗಳು ಮಳೆಯಂತೆ ಸುರಿಯುತ್ತಿವೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ವೀಡಿಯೊಪ್ರಕಾರ ಸಾಯಿಲ್(ಮಣ್ಣು) ಸ್ವಚಗೊಳಿಸುವಾಗ ಇಲಿಗಳು ಯಂತ್ರದಿಂದ ಸುರಿಯುವುದನ್ನು ತೋರಿಸಲಾಗಿದೆ ಇದರಿಂದಾಗಿ ಇದಕ್ಕೆ ಇಲಿ ಮಳೆ ಎಂಬ ಹೆಸರು ಆಚರಣೆಗೆ ಬಂದಿದೆ ಎನ್ನಲಾಗಿದೆ. * ಪ್ರಸ್ತುತ ಇಲಿಗಳ ಈ ದೊಡ್ಡ ಜನಸಂಖ್ಯೆಯಿಂದಾಗಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಆಹಾರ ಧಾನ್ಯಗಳಿಗೆ ಹಾನಿಯಾಗುತ್ತಿದೆ. * ಪ್ಲೇಗ್ ಎಂಬುದು ಯೆರ್ಸೀನಿಯಾ ಪೆಸ್ಟಿಸ್ ಎಂಬ ರಾಡ್ ಆಕಾರದ ಬ್ಯಾಕ್ಟೀರಿಯಾದಿಂದ ಉಂಟಾಗುವ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಾಗಿದೆ, ಮತ್ತು ಇದು ದಂಶಕಗಳಂತಹ ಪ್ರಾಣಿಗಳಲ್ಲಿ ಕಂಡುಬರುತ್ತದೆ, ಇಲಿಗಳ ಜನಸಂಖ್ಯೆಯು ಹೆಚ್ಚಾಗುತ್ತಿದೆ ಜೊತೆಗೆ ಪ್ಲೇಗ್ ಹೆಚ್ಚುತ್ತಿದೆ. * ಪ್ಲೇಗ್ ರೋಗವು 13ನೇ ಶತಮಾನದಲ್ಲಿ ಯುರೋಪಿನ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿತ್ತು, ಇದೆ ಕಾರಣದಿಂದ ಇದಕ್ಕೆ ಬ್ಲ್ಯಾಕ್ ಡೆತ್ ಎಂಬ ಹೆಸರು ಕೂಡ ಬಂದಿದೆ. * ಪ್ಲೇಗ್ ಇದು ಪೂರ್ವ ಆಸ್ಟ್ರೇಲಿಯಾದ ರಾಜ್ಯಗಳಲ್ಲಿ ಮಾರ್ಚ್ ಮಧ್ಯದಲ್ಲಿ ಆರಂಭವಾಯಿತು. * ಆಸ್ಟ್ರೇಲಿಯಾ ರೈತರು, ನಿವಾಸಿಗಳ ಮೇಲೆ ಪರಿಣಾಮ ಬೀರುವ ಮೌಸ್ ಪ್ಲೇಗ್'ನ್ನು ಎದುರಿಸಲು ನ್ಯೂ ಸೌತ್ ವೇಲ್ಸ್ ಸರ್ಕಾರವು 50 ಮಿಲಿಯನ್ USDಬೆಂಬಲ ಪ್ಯಾಕೇಜ್ ರೈತರಿಗೆ ನೀಡಿತ್ತು, ಮತ್ತು ದೇಶದಲ್ಲಿನ ಇಲಿ ಮಳೆ ನಿಯಂತ್ರಣಕ್ಕೆ ತರಲು ಸರ್ಕಾರವು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ.