Job Description: * ಕೆ.ಪಿ.ಶರ್ಮಾ ಒಲಿ ಅವರು ಪ್ರಸ್ತುತ ನೇಪಾಳ ರಾಷ್ಟ್ರದ ಪ್ರಧಾನಿಯಾಗಿ 3ನೇ ಬಾರಿ ಅಧಿಕಾರ ಸ್ವೀಕಾರ ಮಾಡಿದರು. * ನೇಪಾಳ ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ಅವರು ಶೀತಲ ನಿವಾಸದಲ್ಲಿ ನೆರವೇರಿದ ಸಮಾರಂಭದಲ್ಲಿ ಪ್ರಧಾನಿ ಕೆಪಿ ಶರ್ಮಾ ಒಲಿ ಅವರಿಗೆ ಪ್ರಮಾಣವಚನ ಬೋಧಿಸಿದರು. * ಈ ಹಿಂದೆ ನೇಪಾಳದ ಪ್ರತಿ ಪಕ್ಷಗಳು ಪ್ರಧಾನಿ ಕೆಪಿ ಶರ್ಮಾ ಒಲಿ ಅವರಿಗೆ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸಿದ್ದವು ಇದರಿಂದಾಗಿ ನೇಪಾಳ ಪ್ರಧಾನಿ ವಿಶ್ವಾಸಮತ ಯಾಚನೆ ಮಾಡಿದರು, ಆದರೆ ಇವರಿಗೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ, ಇದಾದ ನಂತರ ನೇಪಾಳ ಪ್ರತಿ ಪಕ್ಷಗಳು ಕೂಡ ಬಹುಮತ ಪಡೆಯವಲ್ಲಿ ವಿಫಲವಾದವು, ಈ ಕಾರಣದಿಂದಾಗಿ ಶರ್ಮಾ ಒಲಿ ಅವರನ್ನೇ ಪ್ರಧಾನಿಯನ್ನಾಗಿ ಮರು ನೇಮಕ ಮಾಡಲಾಯಿತು ಎಂದು ತಿಳಿಸಿದ್ದಾರೆ.