Job Description: * ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪಶ್ಚಿಮ ಬಂಗಾಳದ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಿದೆ, ಇದರಿಂದ ಬ್ಯಾಂಕ್'ನ ಯಾವುದೇ ವ್ಯವಹಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. * ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2021ರ ಮೇ.13ರಂದು ಪಶ್ಚಿಮ ಬಂಗಾಳದ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಿದೆ. * ಪ್ರಸ್ತುತ ಈ ಬ್ಯಾಂಕ್'ಗೆ RBI ಆದೇಶ ಇಲ್ಲದೆ ಖಾತೆದಾರರ ಹಣ ವಿತ್ಡ್ರಾ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ ಆದರೆ ಜೊತೆಯಲ್ಲೇ ಬ್ಯಾಂಕ್'ನ ಎಲ್ಲ ಖಾತೆದಾರರ ಹಣ ಸುರಕ್ಷಿತವಾಗಿರುತ್ತದೆ ಎಂದು RBI ಮಾಹಿತಿಯನ್ನು ನೀಡಿದೆ. * ಪ್ರಸ್ತುತ RBI ಪಶ್ಚಿಮ ಬಂಗಾಳದ ಈ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ವ್ಯವಹಾರಗಳನ್ನೂ ಮುಂದುವರಿಸಲು ಬ್ಯಾಂಕಿಗೆ ಸಾಕಷ್ಟು ಬಂಡವಾಳವಿಲ್ಲ ಮತ್ತು ಖಾತೆದಾರರ ಹಣದ ಸುರಕ್ಷತೆಯಿಂದಾಗಿ ಬ್ಯಾಂಕಿನ ವ್ಯವಹಾರವನ್ನು ಮುಚ್ಚಬೇಕಾಗುತ್ತದೆ ಎಂದು ತಿಳಿಸಿದೆ. * RBI 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 56ರ ಸೆಕ್ಷನ್ 11(1) ಮತ್ತು ಸೆಕ್ಷನ್ 22(3) (D) ನಿಬಂಧನೆಗಳ ಅಡಿಯಲ್ಲಿ ಪಶ್ಚಿಮ ಬಂಗಾಳದ ಈ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್'ನ್ನು ಸ್ಥಗಿತಗೊಳಿಸಲು RBI ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.