Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಕೋವಿಡ್ ಸೋಂಕಿನ ಔಷಧಿ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿರುವ 2-ಡಯಾಕ್ಸಿ-ಡಿ-ಗ್ಲೂಕೋಸ್ (2-DG) ಔಷಧದ 10 ಸಾವಿರ ಡೋಸ್ಗಳ ಮುಂದಿನ ವಾರ ಬಳಕೆಗೆ ಸಿಗಲಿವೆ ಹಾಗೂ ಈ ಔಷಧಿಗಳಿಗೆ ಚಾಲನೆ ನೀಡಲಾಗುವುದು ಎಂದು DRDO ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ಭಾರತೀಯ ಔಷಧ ಮಹಾನಿಯಂತ್ರಕರು DRDO ಅಭಿವೃದ್ಧಿಪಡಿಸಿರುವ ಈ ಔಷಧದ ತುರ್ತು ಬಳಕೆಗೆ ಅನುಮೋದನೆ ನೀಡಿದ್ದಾರೆ. * ಪ್ರಸ್ತುತ 2-ಡಿಜಿ ಔಷಧವನ್ನು ಹೈದರಾಬಾದ್ನ ಡಾ. ರೆಡ್ಡೀಸ್ ಲ್ಯಾಬ್ನ ಸಹಯೋಗದಲ್ಲಿ DRDOದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ, ಎಂದು ಮಾಹಿತಿ ತಿಳಿದು ಬಂದಿದೆ, ಹಾಗೂ ಈ ಔಷಧಿಗಳು ಮುಂದಿನ ವಾರದ ಆರಂಭದಲ್ಲಿ ಕೋರೋಣ ಸೋಂಕಿನ ವಿರುದ್ಧ ಬಳಕೆಗೆ ಸಿಗಲಿವೆ ಎನ್ನಲಾಗಿದೆ. * DRDO ಅಭಿವೃದ್ಧಿಪಡಿಸಿರುವ ಮೊದಲ ಹಂತದಲ್ಲಿ 10 ಸಾವಿರ ಡೋಸ್'ಗಳನ್ನೂ ನೀಡಲಾಗುತ್ತದೆ ಎಂದು DRDO'ನ ಅಧಿಕಾರಿ ನಾರಾಯಣ್ ಭಟ್ ರವರು ಮಾಹಿತಿಯನ್ನು ನೀಡಿದ್ದಾರೆ. * DRDO ಅಭಿವೃದ್ಧಿಪಡಿಸಿರುವ ಈ ಔಷಧಿ ಪುಡಿಯ ರೂಪದಲ್ಲಿರಲಿದೆ, ಈ 2-ಡಿಜಿ ಔಷಧವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ, ಮತ್ತು ಇದರಿಂದ ಕೋವಿಡ್-19 ರೋಗಿಗಳು ಶೀಘ್ರವಾಗಿ ಗುಣವಾಗಲು ಇದು ಅನುಕೂಲವಾಗಿದೆ ಜೊತೆಗೆ ರೋಗಿಗಳಿಗೆ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಲಿದೆ ಎಂದು ವಿಜ್ಞಾನಿಗಳು ಹೇಳಿಕೆಯನ್ನು ನೀಡಿದ್ದಾರೆ.