Job Description: * ಹೈದರಾಬಾದ್'ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ಉಡುಪಿ ಮೂಲದ IPS ಅಧಿಕಾರಿಯಾಗಿದ್ದ ದಿವಂಗತ ಕೆ. ಮಧುಕರ್ ಶೆಟ್ಟಿ ಹೆಸರು ಇಡಲಾಗಿದೆ. * ಪ್ರಾಮಾಣಿಕತೆ, ದಕ್ಷತೆಗೆ ಉತ್ತಮ ಹೆಸರುವಾಸಿಯಾಗಿರುವ ಮಧುಕರ್ ಶೆಟ್ಟಿ ಅವರ ಹೆಸರನ್ನು ಹೈದರಾಬಾದ್'ನ ಪೋಲೀಸ್ ಅಕಾಡೆಮಿ ಕೇಂದ್ರದ ಮುಖ್ಯ ಸಭಾಂಗಣಕ್ಕೆ ಇಡಲಾಗಿದೆ, ಈ ಮಾಹಿತಿಯನ್ನು ಪೋಲೀಸ್ ಅಕಾಡೆಮಿ ಕೇಂದ್ರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. * ಉಡುಪಿ ಜಿಲ್ಲೆಯ ವಡ್ಡರ್ಸೆಯವರಾದ ಡಾ. ಕೆ. ಮಧುಕರ್ ಶೆಟ್ಟಿ (1971-2018) ಕರ್ನಾಟಕ ಕೇಡರ್ನ 1999 ಬ್ಯಾಚ್ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದರು, ಮತ್ತು ಇವರು ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ, ಇವರು ಎಚ್1ಎನ್1 ರೋಗದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ 2018 ಡಿಸೆಂಬರ್ 28ಕ್ಕೆ ಸಾವನ್ನಪ್ಪಿದ್ದರು.