Job Description: * ಚೀನಾ ದೇಶವು 2021ರ ಏಪ್ರಿಲ್ 29ರಂದು ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದ ವೆನ್ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ಕೇಂದ್ರದಿಂದ ಮಾರ್ಚ್ 5ಬಿ ರಾಕೆಟ್ ಬಳಸಿ ಚೀನಾ ತನ್ನ ಬಾಹ್ಯಾಕಾಶ ನಿಲ್ದಾಣದ ಪ್ರಮುಖ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ರವಾನಿಸಿತ್ತು. * ಇದೀಗ ಚೀನಾ ಉಡಾವಣೆ ಮಾಡಿದ್ದ ಮಾರ್ಚ್ 5ಬಿ ರಾಕೆಟ್ ನಿಯಂತ್ರಣವನ್ನು ತಪ್ಪಿತ್ತು ಸದ್ಯ ಆ ರಾಕೆಟ್ ಭೂಮಿಯನ್ನು ಪ್ರವೇಶಿಸಿದೆ ಅಂದರೆ ಮಾಲ್ಡೀವ್ಸ್ ಸಮೀಪ ಹಿಂದೂ ಮಹಾಸಾಗರದಲ್ಲಿ ರಾಕೆಟ್'ನ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. * ಬೀಜಿಂಗ್ ಕಾಲಮಾನದ ಪ್ರಕಾರ ಬೆಳಗ್ಗೆ 10.24ರ ವೇಳೆಗೆ ಲಾಂಗ್ ಮಾರ್ಚ್ 5ಬಿ ರಾಕೆಟ್ನ ಭಗ್ನಾವಶೇಷವು ಭೂ ವಾತಾವರಣವನ್ನು ಪ್ರವೇಶಿಸಿದೆ. * ಕ್ಯಾಲಿಫೋರ್ನಿಯಾದ ಏರೋಸ್ಪೇಸ್ ಕಾರ್ಪೊರೇಷನ್ ನೀಡಿರುವ ಮಾಹಿತಿಯ ಪ್ರಕಾರ ಇದು ಪ್ರಸ್ತುತ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ 6ನೇ ಅತೀ ದೊಡ್ಡ ಅವಶೇಷವಾಗಿದೆ ಎಂದು ತಿಳಿಸಿದೆ. * ಮಾರ್ಚ್ 5ಬಿ ರಾಕೆಟ್ 108 ಅಡಿ ಎತ್ತರ ಮತ್ತು 20 ಸಾವಿರ ಕೆ.ಜಿ. ತೂಕವನ್ನು ಹೊಂದಿತ್ತು.