Job Description: * ಭಾರತದಲ್ಲಿ ಕರೋನ ವೈರಸ್'ನ 2ನೇ ಅಲೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಇನ್ಫೋಸಿಸ್ ಫೌಂಡೇಶನ್'ನ ವತಿಯಿಂದ 100 ಕೋಟಿ ರೂಪಾಯಿ ದೇಣಿಗೆ ನೀಡಲಾಗುತ್ತಿದೆ ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ತಿಳಿಸಿದ್ದಾರೆ. * ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ವೆಂಟಿಲೇಟರ್, ಆಕ್ಸಿಜನ್ ಪೂರೈಕೆಗೆ ಮತ್ತು ಮೂಲಸೌಕರ್ಯ ಬಳಕೆಗೆ 100 ಕೋಟಿ ರೂ. ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ ತಿಳಿಸಿದೆ, ಈ ಹಿಂದೆ ಕೂಡ ಅಂದರೆ ಕೋವಿಡ್-19 ಮೊದಲನೇ ಅಲೇ ನಿಯಂತ್ರಣಕ್ಕಾಗಿ 100 ಕೋಟಿ ರೂ.ಗಳನ್ನೂ ನೀಡಿತ್ತು, ಇದೀಗ ಇನ್ಫೋಸಿಸ್ ಫೌಂಡೇಶನ್'ನ ವತಿಯಿಂದ ಕೋವಿಡ್-19 ರೋಗದ ವಿರುದ್ಧದ ಭಾರತದ ಹೋರಾಟಕ್ಕೆ ಒಟ್ಟಾರೆ 200 ಕೋಟಿ ರೂ. ದೇಣಿಗೆ ನೀಡಿದಂತಾಗುತ್ತಿದೆ.