Job Description: * ರಷ್ಯಾ ದೇಶದ ಸ್ಪುಟ್ನಿಕ್-ವಿ ಕೋವಿಡ್-19 ಲಸಿಕೆಯ ಸರಿ ಸುಮಾರು 361 ಮಿಲಿಯನ್ ಡೋಸ್ 2022ರ ಮಾರ್ಚ್ ತಿಂಗಳಿನ ಅಂತ್ಯಕ್ಕೆ ಭಾರತವನ್ನು ತಲುಪಲಿವೆ, ಹಾಗೂ ಕೋವಿಡ್-19 ಲಸಿಕೆಯಿಂದ 36 ಕೋಟಿ ಭಾರತೀಯ ಜನರಿಗೆ ಉಪಯೋಗವಾಗಲಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ರಷ್ಯಾದಿಂದ ಈಗಾಗಲೇ ಮೊದಲನೇ ಹಂತವಾಗಿ ಮೇ.1 ರಂದು 1.5 ಮಿಲಿಯನ್ ಡೋಸ್ ಲಸಿಕೆಯನ್ನು ಭಾರತಕ್ಕೆ ರವಾನಿಸಲಾಗಿದೆ, ಇದೇ ತರಹ ಮೇ'ನಲ್ಲಿ 3 ಮಿಲಿಯನ್, ಹಾಗೂ ಜೂನ್'ನಲ್ಲಿ 5 ಮಿಲಿಯನ್ ಮತ್ತು ಜುಲೈ ತಿಂಗಳಿನಲ್ಲಿ10 ಮಿಲಿಯನ್ ಸೇರಿದಂತೆ 18 ಮಿಲಿಯನ್ ಸ್ಪುಟ್ನಿಕ್-ವಿ ಲಸಿಕೆಯ ಡೋಸ್ಗಳನ್ನು ಭಾರತ ಪಡೆಯಲಿದೆ. * 2020 ಜೂನ್ ನಿಂದ 2021 ಮಾರ್ಚ್'ವರೆಗೂ ಸುಮಾರು 238 ಮಿಲಿಯನ್ ಕೋವಿಡ್-19 ಲಸಿಕೆಯ ಡೋಸ್ನ್ನು ಭಾರತದಲ್ಲಿಯೇ ಉತ್ಪಾದಿಸಲಾಗಿದೆ. * ಪ್ರಸ್ತುತ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆಯ ಮತ್ತು ಸ್ಪುಟ್ನಿಕ್-ವಿ ಈ ಮೂರೂ ಲಸಿಕೆಗಳನ್ನು ಭಾರತದಲ್ಲಿ ಬಳಸಲು ಅನುಮತಿ ಪಡೆದಿವೆ.