Job Description: * ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು ಮೇ 8ರಂದು ಆಚರಿಸಲಾಗುತ್ತದೆ, ಈ ದಿನವನ್ನು ಥಲಸ್ಸೆಮಿಯಾ ರೋಗಿಗಳನ್ನು ಉತ್ತೇಜಿಸಲು ಆಚರಿಸಲಾಗುತ್ತದೆ. * ಥಲಸ್ಸೆಮಿಯಾ ಎನ್ನುವ ರೋಗವು ಆನುವಂಶಿಕವಾಗಿರುವ ರಕ್ತದ ಕಾಯಿಲೆಯಾಗಿದೆ, ಈ ರೋಗವು ಪೋಷಕರಿಂದ ಮಕ್ಕಳಿಗೆ ರವಾನಿಸಲಾಗುತ್ತದೆ. * ವ್ಯಕ್ತಿಯು ಥಲಸ್ಸೆಮಿಯಾ ರೋಗದ ಸೋಂಕಿಗೆ ಒಳಗಾದಾಗ ಆ ಮನುಷ್ಯನ ದೇಹವು ಹಿಮೋಗ್ಲೋಬಿನ್ ಉತ್ಪಾದಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಮತ್ತು ಹಂತ ಹಂತವಾಗಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಈ ಥಲಸ್ಸೆಮಿಯಾ ರೋಗವು ದಕ್ಷಿಣ ಏಷ್ಯಾ, ಆಫ್ರಿಕನ್ ಮತ್ತು ಮೆಡಿಟರೇನಿಯನ್ ದೇಶಗಳಲ್ಲಿ ಅತೀ ಹೆಚ್ಚಾಗಿ ಕಾಣಬಹುದಾಗಿದೆ. * ಪ್ರತಿ ವರ್ಷ ಭಾರತದಲ್ಲಿ ಥಲಸ್ಸೆಮಿಯಾ ರೋಗದ 10,000 ಮಕ್ಕಳು ಜನಿಸುತ್ತಾರೆ. * ಥಲಸ್ಸೆಮಿಯಾ ರೋಗವು ಕೆಲ ಸಮುದಾಯಗಳಿಗೆ ಅಂದರೆ ಕರ್ನಾಟಕದ ಲಿಂಗಾಯತ, ಮಹಾರಾಷ್ಟ್ರದ ಕೋಲಿಸ್ ಮತ್ತು ಅಗ್ರಿಸ್, ಪಂಜಾಬಿಗಳು ಮತ್ತು ಸಿಂಧಿಗಳಲ್ಲಿ ಹೆಚ್ಚಾಗಿ ಕಾಣಬಹುದು. * 2020 ಅಕ್ಟೋಬರ್ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಥಲಸ್ಸೆಮಿಯಾ ಬಾಲ್ ಸೇವಾ ಯೋಜನೆಯ ಎರಡನೇ ಹಂತವನ್ನು ಆರಂಭಿಸಿದೆ, ಈ ಯೋಜನೆಯು ಸಿಕಲ್ ಸೆಲ್ ಕಾಯಿಲೆ ಮತ್ತು ಥಲಸ್ಸೆಮಿಯಾಕ್ಕೆ ರೋಗವನ್ನು ಗುಣಪಡಿಸುವ ಗುರಿಯನ್ನು ಹೊಂದಿದೆ.