Job Description: * ವಿಶ್ವಸಂಸ್ಥೆಯ ಅಂಗಸಂಸ್ಥೆಗಳು 10 ಸಾವಿರ ಆಮ್ಲಜನಕ ಕಾನ್ಸಂಟ್ರೇಟರ್'ಗಳು ಹಾಗೂ 1 ಕೋಟಿ ವೈದ್ಯಕೀಯ ಮಾಸ್ಕ್ಗಳು ಜೊತೆಗೆ 15 ಲಕ್ಷ ಫೇಸ್ಶೀಲ್ಡ್ಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿವೆ. * ವಿಶ್ವಸಂಸ್ಥೆಯು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತಕ್ಕೆ ವೈದ್ಯಕೀಯ ಉಪಕರಣಗಳನ್ನು ನೀಡಲಾಗುತ್ತದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರ ವಕ್ತಾರ ಸ್ಟೆಫನ್ ದುಜಾರ್ರಿಕ್ ಮಾಹಿತಿಯನ್ನು ನೀಡಿದ್ದಾರೆ. * ಕೋರೋಣ ಲಸಿಕೆಗಳ ಸಂಗ್ರಹಕ್ಕಾಗಿ ಯುನಿಸೆಫ್ ಉಪಕರಣವನ್ನು ನೀಡಲಿದೆ ಎಂದು ತಿಳಿಸಿದೆ. * ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕವಾಗಿ ಆರೋಗ್ಯ ಸೌಲಭ್ಯಗಳಿಗೋಸ್ಕರ ಟೆಂಟ್ ಹಾಗೂ ಬೆಡ್ಗಳನ್ನು ನೀಡಿದೆ ಅದರ ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ತಜ್ಞ ವೈದ್ಯರನ್ನು ಕೂಡ ನಿಯೋಜಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.