Job Description: * ಮುಂಬೈನ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ಅವರು ಗೋವಾ ರಾಜ್ಯದ ನೂತನ ಲೋಕಾಯುಕ್ತರಾಗಿ ಗೋವಾದ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. * ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ಅವರಿಗೆ ಗೋವಾ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಮಾಣವಚನ ಬೋಧಿಸಿದರು, ಇವರ ಜೊತೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕೂಡ ಇದ್ದರು. * 2019ರ ಸಪ್ಟೆಂಬರ್ನಲ್ಲಿ ಗೋವಾ ರಾಜ್ಯದ ಮಾಜಿ ಲೋಕಾಯುಕ್ತ ಎಂ.ಕೆ.ಮಿಶ್ರಾ ರವರು ನಿವೃತ್ತರಾಗಿದ್ದರು. * ಸರ್ಕಾರವು ಈ ಹಿಂದೆ ಲೋಕಾಯುಕ್ತ ಖಾಯ್ದೆಯ ತಿದ್ಧುಪಡಿ ವಿಧೇಯಕಕ್ಕೆ ಮಂಜೂರಿ ನೀಡಲಾಗಿತ್ತು, ಇದರಿಂದ ಲೋಕಾಯುಕ್ತ ಖಾಯ್ದೆ ತಿದ್ಧುಪಡಿ ಮಾಡಿ ಲೋಕಾಯುಕ್ತರ ಅಧಿಕಾರವನ್ನು ಕಡಿಮೆಗೊಳಿಸಲಾಗಿದೆ.