Job Description: * ಜಾಗತಿಕ ಉನ್ನತ ಶಿಕ್ಷಣ ಸಲಹಾ ಕ್ವಾಕ್ವೆರೆಲ್ಲಿ ಸೈಮಂಡ್ಸ್(QS) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿ ಸಿದ್ಧಪಡಿಸಿದೆ, ಈ ಶ್ರೇಯಾಂಕ ಪಟ್ಟಿಯಲ್ಲಿ ಐಐಟಿ ಬಾಂಬೆಯು ಭಾರತದಲ್ಲಿಯೇ ಅಗ್ರ ಸ್ಥಾನವನ್ನು ಪಡೆದಿದೆ. * ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಐಐಟಿ-ಬಾಂಬೆ ಹೊರಹೊಮ್ಮಿದೆ, ಜಾಗತಿಕ ಶ್ರೇಯಾಂಕದಲ್ಲಿ 172ನೇ ಸ್ಥಾನ ಐಐಟಿ-ಬಾಂಬೆ ಪಡೆದಿದೆ. * 2021ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಐಐಎಸ್ ಸಿ ಬೆಂಗಳೂರು 185ನೇ ಸ್ಥಾನ ಪಡೆದಿದೆ ಮತ್ತು ಐಐಟಿ-ದೆಹಲಿ 193ನೇ ಸ್ಥಾನ ಪಡೆದರೆ, ಐಐಟಿ ಮದ್ರಾಸ್ 275, ಐಐಟಿ ಖರಗಪುರ 314ನೇ ಹಾಗೂ ಐಐಟಿ ಕಾನ್ಪುರ್ 350ನೇ ಸ್ಥಾನವನ್ನು ಪಡೆದಿದೆ. * 2021ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯ ಪ್ರಕಾರ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಗೂ ಸ್ಟ್ಯಾಂಡ್ಫೋರ್ಡ್ ವಿಶ್ವವಿದ್ಯಾಲಯ, ಮತ್ತು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯವು ಪ್ರಸ್ತುತ ವಿಶ್ವದ ಮೂರು ಉನ್ನತ ಶ್ರೇಣಿಯ ವಿಶ್ವ ವಿದ್ಯಾಲಯಗಳಾಗಿವೆ ಎಂದು ಕ್ಯೂಎಸ್ ಶ್ರೇಯಾಂಕ ಪಟ್ಟಿಯ್ಲಲಿ ತಿಳಿಸಲಾಗಿದೆ.