Job Description: * ಪ್ರಸ್ತುತ ಅಮೇರಿಕಾ ದೇಶವು ಕೋವಿಡ್-19 ಲಸಿಕೆಗಳಿಗೆ ಪೇಟೆಂಟ್ ಸಂರಕ್ಷಣೆಗಾಗಿ ಜಾಗತಿಕ ರದ್ದತಿಗೆ ಬೆಂಬಲವನ್ನು ನೀಡಿದೆ, ಭಾರತವು ಈ ಬೆಂಬಲವನ್ನು ಸ್ವಾಗತಿಸಿದೆ. * ಅಮೇರಿಕ ಸರ್ಕಾರವು ಬೆಂಬಲವನ್ನು ನೀಡಿದ ಈ ಪೇಟೆಂಟ್ ಸಂರಕ್ಷಣೆಯ ಉಪಕ್ರಮಕ್ಕೆ ಭಾರತ ಸ್ವಾಗತಿಸುತ್ತಿದೆ ಈ ರದ್ದತಿಯನ್ನು ಡಬ್ಲ್ಯುಟಿಒನಲ್ಲಿ ತ್ವರಿತವಾಗಿ ಅನುಮೋದಿಸಬಹುದು ಎಂದು ಭಾವಿಸಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ. * ಅಮೇರಿಕ ಅಧ್ಯಕ್ಷ ಬಿಡೆನ್ ಅವರು 2021 ಏಪ್ರಿಲ್ 26ರಂದು ಫೋನಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಡಬ್ಲ್ಯುಟಿಒನಲ್ಲಿ ಈ ಉಪಕ್ರಮದ ಮಾಹಿತಿ ನೀಡಿದರು. * ಅಮೇರಿಕ ಅಧ್ಯಕ್ಷ ಬಿಡೆನ್ ಅವರ ಆಡಳಿತವು ಈ ಕೋವಿಡ್-19 ಲಸಿಕೆಗಳಿಗೆ ಪೇಟೆಂಟ್ ಸಂರಕ್ಷಣೆಯ ಜಾಗತಿಕ ರದ್ದತಿಗೆ ಬೆಂಬಲವನ್ನು ಘೋಷಣೆ ಮಾಡಿದೆ ಹಾಗೂ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಈ ರದ್ದತಿಯ ನಿಯಮಗಳ ಮಾಹಿತಿಯ ಮಾತುಕತೆ ನಡೆಯಲಿದೆ ಅಮೇರಿಕ ವಾಣಿಜ್ಯ ಪ್ರತಿನಿಧಿ ಕ್ಯಾಥರೀನ್ ತೈ ಟ್ವೀಟ್ ಮೂಲಕ ತಿಳಿಸಿದ್ದಾರೆ.