Job Description: * ಪ್ರಸ್ತುತ ಪುದುಚೇರಿ ನೂತನ ಮುಖ್ಯಮಂತ್ರಿಯಾಗಿ ಎನ್ ರಂಗಸ್ವಾಮಿ ಅವರು ಅಧಿಕಾರವನ್ನು ಸ್ವೀಕರಿಸಿದರು, ಇವರು ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದಾರೆ. * ಪುದುಚೇರಿಯ ರಾಜ್ಯಪಾಲರಾದ ತಮಿಳಿಸಾಯ್ ಸೌಂದರ ರಾಜನ್ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್ ರಂಗಸ್ವಾಮಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. * ಎನ್ ರಂಗಸ್ವಾಮಿ ಅವರು ಪುದುಚೇರಿಯಲ್ಲಿ 4ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. * ಪ್ರಸ್ತುತ ಪುದುಚೇರಿಯ 30 ಸ್ಥಾನಗಳ ವಿಧಾನಸಭೆಗೆ ಚುನಾವಣೆ ನಡೆಸಲಾಗಿತ್ತು, ಅದರಲ್ಲಿ ಎನ್ಡಿಎ ಮೈತ್ರಿಕೂಟ 16 ಸ್ಥಾನ ಗೆದ್ದು ಬಹುಮತ ಪಡೆದು ಅಧಿಕಾರವನ್ನು ಪಡೆದುಕೊಂಡಿದೆ. * ಎ.ನಮಶಿವಾಯಂ ಅವರು ಪುದುಚೇರಿಯ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ ಎಂದು ಪಕ್ಷವು ಮಾಹಿತಿಯನ್ನು ನೀಡಿದೆ.