Job Description: * ಪ್ರಸ್ತುತ ಆರೋಗ್ಯ ಸಂಸ್ಥೆಯು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ರೋಗಿಗಳ ತುರ್ತು ಬಳಕೆಗಾಗಿ ಚೀನಾದ ಸಿನೋಫಾರ್ಮ್ ಲಸಿಕೆಗೆ ಶರತ್ತುಬದ್ಧ ಅನುಮತಿ ನೀಡಿದೆ. * ವಿಶ್ವ ಆರೋಗ್ಯ ಸಂಸ್ಥೆಯು ಈ ಹಿಂದೆ ಅನೇಕ ದೇಶಗಳ ಫೈಜರ್ /ಬಯೋಎನ್ ಟೆಕ್, ಆಸ್ಟ್ರಾಜೆನೆಕಾ-ಎಸ್ ಕೆ ಬಯೋ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಜಾನ್ಸೆನ್ ಲಸಿಕೆಗಳನ್ನು ಪಟ್ಟಿಮಾಡಿ ತುರ್ತು ಬಳಕೆಗೆ ಅನುಮತಿಯನ್ನು ನೀಡಿತ್ತು, ಇದೀಗ ಚೀನಾದ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. * ಚೀನಾ ದೇಶದ ಈ ಸಿನೋಫಾರ್ಮ್ ಲಸಿಕೆಯ ಪ್ರಸ್ತುತ 45 ದೇಶಗಳು ಬಳಸಲು ಅನುಮತಿಯನ್ನು ಪಡೆದಿವೆ, ಈ ಹಿಂದೆ ಚೀನಾ ದೇಶದ ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಬಳಕೆಗೆ ಅನುಮತಿ ನೀಡದ ಕಾರಣ ಅನೇಕ ದೇಶಗಳು ಈ ಲಸಿಕೆಯನ್ನು ಬಳಸಲು ಹಿಂಜರಿಯುತ್ತಿದ್ದವು, ಇದೀಗ ಈ ಲಸಿಕೆ ತುರ್ತು ಬಳಕೆ ಮಾಡಲು ಆರೋಗ್ಯ ಸಂಸ್ಥೆ ಅನುಮತಿಯನ್ನು ನೀಡಿದೆ. * ಪ್ರಸ್ತುತ ಚೀನಾ ದೇಶವು 5 ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ, ಆದರೆ ಕೇವಲ ಸಿನೋಫಾರ್ಮ್ ಮತ್ತು ಸಿನೋವಾಕ್ ಎಂಬ 2 ಲಸಿಕೆಗಳನ್ನು ಬೇರೆ ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ.