Job Description: * ಕೊರೋನಾ ಲಸಿಕೆಯನ್ನು ಜನರಿಗೆ ನೀಡುವ ವಿಚಾರದಲ್ಲಿ ಕೇರಳ ಸರಕಾರವು ಉತ್ತಮ ಕೆಲಸ ಮಾಡಿದೆ ಎಂದು ಪ್ರಧಾನಿ ಮೋದಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. * ದೇಶಾದ್ಯಂತ ಕೋವಿಡ್-19 ಲಸಿಕೆ ಎಲ್ಲಿಲ್ಲದ ಬೇಡಿಕೆ ಮತ್ತು ಹಾಹಾಕಾರ ನಡೆದಿದೆ, ಇದರಂತೆಯೇ ಕೋವಿಡ್-19 ಲಸಿಕೆಗಳ ಜನರಿಗೆ ನೀಡುವಲ್ಲಿ ಹಲವು ರಾಜ್ಯಗಳು ಲಸಿಕೆಗಳನ್ನು ಹಾಳುಮಾಡಿದ್ದವು ಇದೀಗ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೇರಳ ರಾಜ್ಯವು ಲಸಿಕೆ ವ್ಯರ್ಥ ಮಾಡುವಲ್ಲಿ ಅತಿ ಕಡಿಮೆ ಪ್ರಮಾಣವದ ಲಸಿಕೆಗಳನ್ನೂ ವ್ಯರ್ಥ ಮಾಡಿದೆ ಎಂದು ತಿಳಿದು ಬಂದಿದೆ. * ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಯಾವ ತರಹ ಕೊರೊನಾ ಲಸಿಕೆಗಳ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುವದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ, ಈ ವಿಚಾರಕ್ಕೆ ಮೋದಿ ಅವರು ಅಭಿನಂದನೆಯನ್ನು ತಿಳಿಸಿದ್ದಾರೆ. * ಪ್ರಸ್ತುತ ಕೇಂದ್ರ ಸರ್ಕಾರವು ಕೇರಳ ರಾಜ್ಯಕ್ಕೆ 73,38,806 ಡೋಸ್ ಲಸಿಕೆಗಳುನ್ನು ನೀಡಿತ್ತು, ಆದರೆ ಈ ರಾಜ್ಯದಲ್ಲಿ ಒಬ್ಬ ವ್ಯಕ್ತಿಗೆ ಲಸಿಕೆ ನೀಡಿದ ನಂತರ ವ್ಯರ್ಥವಾಗಬಹುದಾದ ಲಸಿಕೆಯನ್ನು ಬಳಸಿಕೊಂಡು ಒಟ್ಟಾರೆ 74,26,164 ಡೋಸ್ ಲಸಿಕೆಯನ್ನು ಕೇರಳ ಸರ್ಕಾರವು ನೀಡಿದೆ. * ಕೇರಳ ರಾಜ್ಯದ ಆರೋಗ್ಯ ಕಾರ್ಯಕರ್ತರು ಹಾಗೂ ದಾದಿಯರ ಕಾರ್ಯ ಕ್ಷಮತೆ ಮತ್ತು ದಕ್ಷತೆಗೆ ಮೆಚ್ಚುಗೆಯನ್ನು ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.