Job Description: * ವಿಶ್ವದ ಅತ್ಯಂತ ಉದ್ದದ ಸೇತುವೆ ಪೋರ್ಚುಗಲ್ನಲ್ಲಿ ನಿರ್ಮಾಣ ಮಾಡಲಾಗಿದೆ, ಇದು ಪಾದಚಾರಿಗಳ ತೂಗು ಸೇತುವೆಯಾಗಿದೆ ಪ್ರಸ್ತುತ ಈ ಪಾದಚಾರಿಗಳ ತೂಗು ಸೇತುವೆಯನ್ನು ಅನಾವರಣ ಗೊಳಿಸಲಾಗಿದೆ. * ಈ ಪಾದಚಾರಿಗಳ ಸೇತುವೆ ವಿಶ್ವದ ಅತ್ಯಂತ ಉದ್ದದ ಪಾದಚಾರಿ ತೂಗು ಸೇತುವೆ ಎಂಬ ಕೀರ್ತಿಯನ್ನು ಪಡೆದಿದೆ, ಈ ತೂಗು ಸೇತುವೆ ನಿರ್ಮಾಣ ಕಾರ್ಯವು 2017ರಲ್ಲಿ ಪ್ರಾರಂಭವಾಗಿತ್ತು. * ಈ ಪಾದಚಾರಿಗಳ ತೂಗು ಸೇತುವೆ 516 ಮೀಟರ್ ಉದ್ದ ಹಾಗೂ ನದಿ ನೀರಿನ ಮಟ್ಟದಿಂದ 175ಮೀ. ಎತ್ತರದಲ್ಲಿದೆ, ಹಾಗೂ ಇದು 6 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಇರುವದಿಲ್ಲ ಎಂದು ತಿಳಿಸಿದೆ. * ಪಾದಚಾರಿಗಳ ಸೇತುವೆಯು ಯುನೆಸ್ಕೋ ಗ್ಲೋಬಲ್ ಜಿಯೋಪಾರ್ಕ್ನಲ್ಲಿದೆ, ಈ ಜಿಯೋಪಾರ್ಕ್ ಅಗುಯಿರಿಸ್ ಜಲಪಾತ ಹಾಗೂ ಪೈವಾ ಜಾರ್ಜ್ನ್ನು ಒಂದುಗೂಡಿಸುತ್ತದೆ.