Job Description: * ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈಚಾರಿಕ ಸಾಹಿತಿ ಸಾಲಿಗ್ರಾಮದ ಡಾ.ಭಾಸ್ಕರ್ ಮಯ್ಯ ಅವರು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು. * ಡಾ.ಭಾಸ್ಕರ್ ಮಯ್ಯ ಅವರು ಕುಂದಾಪುರದ ಭಂಡಾರಕರ ಕಾಲೇಜು ಮತ್ತು ಮುಲ್ಕಿ ಕಾಲೇಜುಗಳಲ್ಲಿ ಒಟ್ಟು 4 ದಶಕಗಳಿಗೂ ಹೆಚ್ಚು ಸಂಸ್ಕೃತ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳನ್ನೂ ಬೋಧಿಸಿದ್ದರು ಜೊತೆಗೆ ಹಿಂದಿ ಪ್ರಾಧ್ಯಾಪಕರಾಗಿ ಒಳ್ಳೆಯ ಹೆಸರನ್ನು ಪಡೆದಿದ್ದರು. * ಡಾ.ಭಾಸ್ಕರ್ ಮಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ Ph.D ಪಡೆದು ಒಟ್ಟು 52 ಪುಸ್ತಕಗಳ ಲೇಖನಗಳನ್ನು ಪ್ರಕಟಣೆ ಮಾಡಿದ್ದಾರೆ, 2002ರಲ್ಲಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸನ್ಮಾನ ಗೌರವವನ್ನುಸ್ವೀಕರಿಸಿದ್ದಾರೆ. * ಕೇಂದ್ರ ಸರ್ಕಾರ 2004ರಲ್ಲಿ ಡಾ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವ ನೀಡಿತ್ತು.