Job Description: * ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದೆ ಇದೇ ಕಾರಣದಿಂದ ಭಾರತವು ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ತುರ್ತು ಆರೋಗ್ಯ ಸೇವೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ 50,000 ಕೋಟಿ ರೂ. ನೀಡಲಿದೆ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. * ಭಾರತೀಯ ರಿಸರ್ವ್ ಬ್ಯಾಂಕ್'ನಿಂದ, ಲಸಿಕೆ ಉತ್ಪಾದನೆ ಮತ್ತು ಆರೋಗ್ಯದ ತುರ್ತು ಬಳಕೆಗೆ 50,000 ಕೋಟಿ ರೂ. ನೀಡಲು RBI ಸಿದ್ಧವಾಗಿದೆ ಪ್ರಸ್ತುತ ಮಾರ್ಚ್ 31, 2022 ತನಕ ಕೋವಿಡ್-19 ಸಂಬಂಧಿತ ಸಾಲವನ್ನು RBI ನೀಡಲಿದೆ ಎಂದು ತಿಳಿಸಿದೆ. * ಇದೇ ಮೇ 20 ರಂದು ಆರ್ಬಿಐನಿಂದ 35,000 ಕೋಟಿ ಮೌಲ್ಯದ ಸೆಕ್ಯೂರಿಟಿಗಳ ಖರೀದಿಯ ಎರಡನೇ ಹಂತವನ್ನು ಆರಂಭಿಸಲಿದೆ ಎಂದು ತಿಳಿಸಿದ್ದಾರೆ.