Job Description: * ಭಾರತ ಸರ್ಕಾರದ ಒಪ್ಪಂದಹಾಗೆ ಬಹ್ರೇನ್ ದೇಶದಿಂದ ಕರ್ನಾಟಕದ ಮಂಗಳೂರಿಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಹಡಗಿನ ಮೂಲಕ ನವಮಂಗಳೂರು ಬಂದರಿಗೆ ಬಂದು ತಲುಪಿದೆ. * ಭಾರತ ಸರ್ಕಾರ ಮತ್ತು ಬಹ್ರೇನ್ ದೇಶಗಳ ಒಪ್ಪಂದದಂತೆ 20 ಮೆಟ್ರಿಕ್ ಟನ್'ನ 2ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳು ಕರ್ನಾಟಕದ ಮಂಗಳೂರಿಗೆ ಬಂದು ತಲುಪಿವೆ. * ಭಾರತೀಯ ಕರಾವಳಿಯ ರಕ್ಷಣಾ ಪಡೆಯ INS ತಲ್ವಾರ್ ಆಕ್ಸಿಜನ್ ಟ್ಯಾಂಕರ್ಗಳನ್ನು ನವಮಂಗಳೂರು ಬಂದರಿನ ಪ್ರದೇಶದಲ್ಲಿ ಕ್ರೇನ್ ಮೂಲಕ ಟ್ಯಾಂಕರ್ಗಳನ್ನು ಇಳಿಸಲಾಗಿದೆ ಎಂದು ತಿಳಿಸಲಾಗಿದೆ. * ನವಮಂಗಳೂರು ಬಂದರಿನಲ್ಲಿ ಸಂಗ್ರಹಣೆ ಮಾಡಲಾಗಿರುವ ಆಕ್ಸಿಜನ್'ನ್ನು ರಾಜ್ಯ ಸರ್ಕಾರವು ಯಾವ ಜಿಲ್ಲೆಗೆ ಎಷ್ಟು ರವಾನಿಸಬೇಕು ಎಂದು ರಾಜ್ಯ ಸರ್ಕಾರ ನಿರ್ಧಾರವನ್ನು ಕೈಗೊಳ್ಳಲಿದೆ, ನಂತರ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆಕ್ಸಿಜನ್'ನ್ನುಇತರೆ ಜಿಲ್ಲೆಗಳಿಗೆ ಸರಬರಾಜು ಮಾಡಲಿದೆ ಎಂದು ಸರ್ಕಾರ ತಿಳಿಸಿದೆ.