Job Description: * 2020ರಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 142ಕ್ಕೆ ಸೂಚನೆ ನೀಡಿತ್ತು. * ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 142 ಇದರಿಂದಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಂದ ಆಧಾರ್ ವಿವರಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ, ಈ ಸೂಚನೆಯಲ್ಲಿ ವಲಸೆ ಕಾರ್ಮಿಕರು ಕೂಡ ಸೇರಿಕೊಂಡಿದ್ದಾರೆ. * ಈ ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 142 ನಿಂದಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರವು ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ದತ್ತಸಂಚಯವನ್ನು ರಚಿಸಲಾಗುತ್ತದೆ ಮತ್ತು ಪೋರ್ಟಲ್'ನಿಂದ ವಲಸೆ ಕಾರ್ಮಿಕರ ಡೇಟಾವನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. * ಕಾರ್ಮಿಕರ ಡೇಟಾವನ್ನು ಸರ್ಕಾರದ ವಿವಿಧ ಯೋಜನೆಗಳು ಬಳಸಲಾಗುತ್ತದೆ. * ವಿಭಾಗ ಸೆಕ್ಷನ್ 142'ನ ಪ್ರಯೋಜನಗಳು ವೈದ್ಯಕೀಯ ಕಾಯಿಲೆಗಳಿಗೆ ಕೇಂದ್ರದ ಸೇವೆಗಳನ್ನು ಪಡೆಯುವುದು, ಹೆರಿಗೆ ಸೌಲಭ್ಯಗಳು, ವಿಮೆ ಮಾಡಿದ ವ್ಯಕ್ತಿಯಾಗಿ ಪಾವತಿ ಪಡೆಯಬಹುದಾಗಿದೆ ಇನ್ನು ಹೀಗೆ ಹಲವು ಉಪಯೋಗಗಳು. * ಪ್ರಸ್ತುತ 2019ರಲ್ಲಿ ಸಾಮಾಜಿಕ ಭದ್ರತಾ ಸಂಹಿತೆಯನ್ನು ತರಲಾಯಿತು, ಇದರಿಂದ ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರಿಗೆ ಆರೋಗ್ಯ ಮತ್ತು ವಿಮಾ ಸೌಲಭ್ಯಗಳನ್ನು ನೀಡಲು ಈ ಸಂಹಿತೆಯನ್ನು ಪರಿಚಯಿಸಲಾಗಿದೆ ಎಂದು ತಿಳಸಲಾಗಿತ್ತು.