Job Description: * ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಮರಾಠಾ ಕೋಟಾವನ್ನು 50% ಸೀಲಿಂಗ್ ಮಿತಿಯನ್ನು ಮೀರಿ ಅಸಂವಿಧಾನಿಕ ಎಂದು ಹೇಳಿದೆ. * ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ 50% ಮೀಸಲಾತಿಯನ್ನು ಮಹಾರಾಷ್ಟ್ರ ಕಾನೂನನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. * ಈ ಹಿಂದೆ 2016ರಲ್ಲಿ ಮರಾಠರು ಮರಾಠಾ ಕ್ರಾಂತಿ ಮೋರ್ಚಾ ಅಡಿಯಲ್ಲಿ ಒಂದುಗೂಡಿದರು ನಂತರ ಅಹಮದ್ನಗರದ ಕೋಪಾರ್ಡಿ ಗ್ರಾಮದಲ್ಲಿ 15ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸುವಲ್ಲಿ ಕೈಜೋಡಿಸಿದರು, ಇದೇ ಕಾರಣ ಇಟ್ಟುಕೊಂಡು ಮರಾಠಾ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಬೇಕೆಂದು 2017ರಲ್ಲಿ ಬೃಹತ್ ರ್ಯಾಲಿಗಳುನ್ನು ನಡೆಸಿ ಬಾಲಕಿಗೆ ಉತ್ತಮ ರೀತಿಯಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. * ನಂತರ 2018 ರಲ್ಲಿ ರಸ್ತೆಗಿಳಿದು ಪ್ರತಿಭಟನೆಗಳನ್ನೂ ಆರಂಭಿಸಿದರು ಮತ್ತು 'ಏಕ್ ಮರಾಠ ಲಕ್ಷ ಮರಾಠಾ' ಎಂಬ ಘೋಷಣೆಯನ್ನು ಆರಂಭಿಸಿದರು. * ಮಹಾರಾಷ್ಟ್ರದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ಕಾಯ್ದೆಯಡಿ 2018ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಮರಾಠರಿಗೆ ಮೀಸಲಾತಿ ನೀಡಿತು, ಅದಲ್ಲದೆ ವಿಧಾನಸಭೆ ಹಾಗೂ ಪರಿಷತ್ತು ಎರಡರಲ್ಲೂ ಈ ಕಾಯ್ದೆಗೆ ಅನುಮೋದನೆ ನೀಡಿತು.