Job Description: * ಭಾರತ ದೇಶದ ಭ್ರಷ್ಟ ಉದ್ಯಮಿಗಳಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಉದ್ಯಮಿಗಳನ್ನೂ ಅತೀ ಶೀಘ್ರವೇ ಭಾರತಕ್ಕೆ ಹಸ್ತಾಂತರ ಮಾಡಲಾಗುವದು ಎಂದು ಈ ವರ್ಚುವಲ್ ಸಭೆಯಲ್ಲಿ ತಿಳಿಸಿದರು. * ಈ ವರ್ಚುವಲ್ ಸಭೆಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರವು ಮತ್ತಷ್ಟು ಉತ್ತಮವಾಗುವ ನಿಟ್ಟಿನಲ್ಲಿ ಭಾರತ ಮತ್ತು ಬ್ರಿಟನ್ ಸಮ್ಮತಿಯನ್ನು ನೀಡಿದವು. * ಎರಡು ದೇಶಗಳು ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಚರ್ಚೆ ನಡೆಸಿದವು ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಚಕ್ರವರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಣೆಯನ್ನು ನೀಡಿದರು. * ಕೋವಿಡ್-19 ಲಸಿಕೆ ಉತ್ಪಾದನಾ ಘಟಕವನ್ನು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬ್ರಿಟನ್ನಲ್ಲಿ ಸ್ಥಾಪಿಸಲಿದೆ ಬೋರಿಸ್ ಜಾನ್ಸನ್ ಮಾಹಿತಿಯನ್ನು ನೀಡಿದರು. * ವರ್ಚುವಲ್ ಸಭೆಯಿಂದಾಗಿ ಭಾರತ ಮತ್ತು ಬ್ರಿಟನ್ ದೇಶಗಳ ಮಧ್ಯೆ ಬಾಂಧವ್ಯ, ವ್ಯಾಪಾರ, ರಕ್ಷಣೆ, ಭದ್ರತೆ, ಹವಾಮಾನ ಬದಲಾವಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಹಕಾರವನ್ನು ನೀಡಲು ಸಮ್ಮತಿಯನ್ನು ನೀಡಿವೆ.