Job Description: * ಪ್ರಸ್ತುತ ಭಾರತೀಯ 4 ಆಟಗಾರ್ತಿಯರಿಗೆ ಇಂಗ್ಲೆಂಡ್'ನಲ್ಲಿ ಮೊದಲ ಬಾರಿ ನಡೆಯಲಿರುವ "ದ ಹಂಡ್ರೆಡ್ ಕ್ರಿಕೆಟ್" ಟೂರ್ನಿಯಲ್ಲಿ ಆಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅನುಮತಿಯನ್ನು ನೀಡಿದೆ. * "ದ ಹಂಡ್ರೆಡ್ ಕ್ರಿಕೆಟ್" (100 ಎಸೆತ) ಟೂರ್ನಿಯ ಜುಲೈ 21ರಿಂದ ನಡೆಯಲಿದೆ, ಈ ಟೂರ್ನಿಯಲ್ಲಿ ಭಾಗವಹಿಸಲು ಹರ್ಮನ್ಪ್ರೀತ್, ಸ್ಮೃತಿ ಮಂದಾನ, ದೀಪ್ತಿ ಶರ್ಮಾ ಈ 3 ಆಟಗಾರ್ತಿಗಳ ಹೆಸರನ್ನು ತಿಳಿಸಿದ್ದಾರೆ ಆದರೆ 4ನೇ ಆಟಗಾರ್ತಿಯ ಹೆಸರನ್ನು ತಿಳಿಸಲಾಗಿಲ್ಲ. * ಜೂನ್-ಜುಲೈ ತಿಂಗಳಿನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ, ಅಲ್ಲಿ 1 ಟೆಸ್ಟ್, 3 ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ ಎಂದು ತಿಳಿಸಲಾಗಿದೆ, ಈ ಎಲ್ಲ ಸರಣಿಗಳು ಮುಕ್ತಾಯವಾದ ಬಳಿಕ "ದ ಹಂಡ್ರೆಡ್" ಟೂರ್ನಿಯಲ್ಲಿ ಆಡಲು 4 ಆಟಗಾರ್ತಿಯರು ಇಂಗ್ಲೆಂಡ್'ನಲ್ಲಿ ಉಳಿಯಲಿದ್ದಾರೆ ಎಂದು BCCI ತಿಳಿಸಿದೆ.