Job Description: * ಪಶ್ಚಿಮ ಬಂಗಾಳ ಸರ್ಕಾರವು 2017ರಲ್ಲಿ ಪಶ್ಚಿಮ ಬಂಗಾಳ ಹೌಸಿಂಗ್ ಇಂಡಸ್ಟ್ರಿ ರೆಗ್ಯುಲೇಷನ್ ಕಾಯ್ದೆಯನ್ನು ಜಾರಿಗೆ ತಂದಿದೆ. * ಈ ಕಾಯ್ದೆಯು ರಿಯಲ್ ಎಸ್ಟೇಟ್ ಕ್ಷೇತ್ರದ ನಿಯಂತ್ರಣಕ್ಕಾಗಿ ಕಾನೂನನ್ನು ರೂಪಿಸಿತ್ತು ಇದೀಗ ಈ ಕಾನೂನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. * ಪಶ್ಚಿಮ ಬಂಗಾಳ ಸರ್ಕಾರವು ರೂಪಿಸಿರುವ ಈ ಕಾನೂನು ಕೇಂದ್ರದ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಅತಿಕ್ರಮಿಸಿದ್ದರಿದಾಗಿ ಸುಪ್ರೀಂಕೋರ್ಟ್ ಈ ಕಾನೂನ್ನು ರದ್ದುಪಡಿಸಿದೆ. * ಪಶ್ಚಿಮ ಬಂಗಾಳ ಸರ್ಕಾರವು ರೂಪಿಸಿರುವ ಈ ರಿಯಲ್ ಎಸ್ಟೇಟ್ ಕಾನೂನನಿಂದಾಗಿ ಮನೆ ಖರೀದಿಸುವವರ ಹಿತರಕ್ಷಣೆಯ ಅಂಶವನ್ನು 2017ರ ಕಾನೂನಿನಲ್ಲಿ ನಿರ್ಲಕ್ಷಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರಿದ್ದ ನ್ಯಾಯಪೀಠದ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಕಾನೂನು ಸಂಸತ್ತಿನ ಅಧಿಪತ್ಯವನ್ನು ಅತಿಕ್ರಮಿಸಿದೆ ಮತ್ತು ಅಸಾಂವಿಧಾನಿಕವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ತಿಳಿಸಿದೆ. * ಪ್ರಸ್ತುತ ಪಶ್ಚಿಮ ಬಂಗಾಳದ ಈ ಕಾನೂನು ಕೇಂದ್ರ ಸರಕಾರದ ಕಾನೂನಿಗೆ ಹೋಲುತ್ತದೆ ಆದ್ದರಿಂದ ಈ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ತಿಳಿಸಿಲಾಗಿದೆ.