Job Description: * ಅಮೆರಿಕದ 7 ಉದ್ಯಮಗಳು ಒಟ್ಟಾರೆ ಸೇರಿಕೊಂಡು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ವಿರುದ್ಧ ಮಸಾಚುಸೆಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ವಿದೇಶಗಳ ಕೆಲಸಗಾರರಿಗೆ ಈ ಹಿಂದೆ ಇರುವಂತೆಯೇ ವಿದೇಶಿ ಕೆಲಸದ ವೀಸಾ ನೀಡಲು ಒಪ್ಪಿಕೊಳ್ಳಗಿದೆ ಇದರಿಂದಾಗಿ ಈ ಮೊಕದ್ದಮೆಯನ್ನು ಕೈ ಬಿಡಲಾಗಿದೆ ಎಂದು ತಿಳಿಸಿದೆ, ಇದರಿಂದ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಯೋಚನೆ ಇರುವ ಉದ್ಯೋಗಿಗೆ ಉಪಯೋಗವಾಗಿದೆ. * ಈ ಹಿಂದೆ ಯುಎಸ್ಸಿಐಎಸ್ ಎಚ್-1ಬಿ ವೀಸಾಗಳಿಗಾಗಿ ಅಕ್ಟೋಬರ್ 1ರ ನಂತರ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು ಸದ್ಯ ವಲಸೆ ಮಂಡಳಿಯು ಅಮೆರಿಕದ 7 ಉದ್ಯಮಗಳ ಪರವಾಗಿ ಅರ್ಜಿಯನ್ನು ಸಲ್ಲಿಸಿದೆ. * ಈ ಸಂಧರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೀಸಾದೊಂದಿಗೆ ಅಮೇರಿಕಕ್ಕೆ ಪ್ರಯಾಣ ಬೆಳಸಲು ಅಮೆರಿಕ ಸರಕಾರ ಷರತ್ತುಬದ್ಧ ಅನುಮತಿ ನೀಡಿದೆ.