Job Description: * ದೇಶದ ಮೊದಲ ತೇಜಸ್ ಎಂಬ ಲಘು ಯುದ್ಧ ವಿಮಾನ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಏರೋನಾಟಿಕಲ್ ವಿಜ್ಞಾನಿ ಮನಸ್ ಬಿಹಾರಿ ವರ್ಮಾ ತಮ್ಮ 78ನೇ ವಯಸ್ಸಿನಲ್ಲಿ ಇತ್ತೀಚಿಗೆ ವಿಧಿವಶರಾದರು. * ಮನಸ್ ಬಿಹಾರಿ ವರ್ಮಾ ಅವರು 1943 ಜುಲೈ. 29ರಂದು ಜನಿಸಿದರು, ಭಾರತದ ವೈಮಾನಿಕ ವಿಜ್ಞಾನಿ, ತೇಜಸ್ ಎಂಬ ಲಘು ಯುದ್ಧ ವಿಮಾನದ ಅಭಿವೃದ್ಧಿಕಾರ್ಯಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. * 2018ರಲ್ಲಿ ಮನಸ್ ಬಿಹಾರಿ ವರ್ಮಾ ಅವರಿಗೆ ಪದ್ಮಶ್ರೀ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು, ಇವರು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯಲ್ಲಿ(DRDO) ಬೆಂಗಳೂರಿನಲ್ಲಿ ಕೆಲಸ ಮಾಡಿದರು. * ಮನಸ್ ಬಿಹಾರಿ ವರ್ಮಾ ಅವರು ತಮ್ಮ ನಿವೃತ್ತಿಯ ನಂತರ ಬಿಹಾರದಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಮೊಬೈಲ್ ಸೈನ್ಸ್ ಲ್ಯಾಬ್ ಅನ್ನು ಆರಂಭಿಸಿದರು.