Job Description: * ನೇಪಾಳ ಪ್ರಧಾನಮಂತ್ರಿಯಾಗಿರುವ ಕೆ.ಪಿ.ಶರ್ಮಾ ಓಲಿ ಅವರು ಇದೇ ಮೇ. 10ರಂದು ಸಂಸತ್ನಲ್ಲಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. * ನೇಪಾಳ ಪ್ರಧಾನಿ ಕಳೆದ ಡಿಸಂಬರ್'ನಲ್ಲಿ ಹಲವು ಸದಸ್ಯರನ್ನು ಕಾನೂನುಬಾಹಿರವಾಗಿ ಡಿಸಾಲ್ವ್ ಮಾಡಿದ ವಿವಾದಾತ್ಮಾಕ ತೀರ್ಪಿನ ಹಿನ್ನಲೆಯಿಂದಾಗಿ ವಿಶ್ವಾಸ ಮತ ಯಾಚನೆ ಕೇಳುವ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ. * ನೇಪಾಳ ಅಧ್ಯಕ್ಷರಾದ ಬಿದ್ಯಾದೇವಿ ಭಂಡಾರಿ ಅವರು ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರಿಗೆ ಮೇ.10ರಂದು ಅಧಿವೇಶನ ಏರ್ಪಡಿಸಿ ವಿಶ್ವಾಸಮತ ಯಾಚನೆ ಮಾಡುವಂತೆ ಶಿಫಾರಸು ಮಾಡಿದ್ದಾರೆ. * ನೇಪಾಳ ಅಧ್ಯಕ್ಷರ ಸೂಚನೆ ಮೇರೆಗೆ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ಇದೇ ತಿಂಗಳು ಮೇ.10 ರಂದು ವಿಶ್ವಾಸ ಮತ ಯಾಚನೆ ಮಾಡಲು ತೀರ್ಮಾನವನ್ನು ಕೈಗೊಂಡಿದ್ದಾರೆ. * ಪ್ರಸ್ತುತ ನೇಪಾಳನ 275 ಸದಸ್ಯರ ಸಂಸತ್ನಲ್ಲಿ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ವಿಶ್ವಾಸ ಮತ ಗೆಲ್ಲಬೇಕಾದರೆ 136 ಮತ ಪಡೆಯಬೇಕಾಗಿದೆ.