Job Description: * ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ರೌಂಡರ್ ತಿಸಾರ ಪೆರೇರ ಅವರು 2021 ರ ಮೇ 3ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ತಿಳಿಸಿದ್ದಾರೆ, ಮತ್ತು ಯುವ ಆಟಗಾರರಿಗೆ ಅವಕಾಶ ಸಿಗಲಿ ಎಂದು ಶ್ರೀಲಂಕಾ ಕ್ರಿಕೆಟ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. * ಇವರು ದೇಶೀಯ ಮತ್ತು ಫ್ರ್ಯಾಂಚೈಸ್ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ. * ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರ ಪೆರೇರ ಅವರು 32 ವರ್ಷದವರಾಗಿದ್ದರೆ, ಇವರು 166 ಏಕದಿನ, 6 ಟೆಸ್ಟ್ ಮತ್ತು 84 T20 ಪಂದ್ಯಗಳನ್ನೂ ಶ್ರೀಲಂಕಾ ತಂಡದಲ್ಲಿ ಆಡಿದ್ದಾರೆ. * ಶ್ರೀಲಂಕಾ ತಂಡವನ್ನು 7 ವಿಶ್ವಕಪ್ ಟೂರ್ನಿಗಳಲ್ಲಿ ಮುನ್ನಡೆಸಿದ್ದಾರೆ, 2014ರ ಬಾಂಗ್ಲಾದೇಶದಲ್ಲಿ ನಡೆದ T20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದಿರುವದರಲ್ಲಿ ನನ್ನ ಪಾತ್ರ ಇದೆ ಎಂದು ತಿಸಾರ ತಿಳಿಸಿದ್ದಾರೆ. * ತಿಸಾರ ಪೆರೇರ ಅವರು ಮುಖ್ಯವಾಗಿ ಬೌಲಿಂಗ್ ಆಲ್ರೌಂಡರ್, ಹಾಗೂ ಆಕ್ರಮಣಕಾರಿ ಎಡಗೈ ಬ್ಯಾಟ್ಸ್ಮನ್ ಆಗಿದ್ದರು ಇವರು ಡೆತ್ ಓವರ್ಗಳಲ್ಲಿ ಸಿಕ್ಸರ್ಗಳನ್ನು ಹೊಡೆಯುವ ಶಕ್ತಿಯನ್ನು ಹೊಂದಿದ್ದಾರೆ.