Job Description: * ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಪ್ರಖ್ಯಾತಿ ಪಡೆದಿರುವ ದಾದಾ ಸಾಹೇಬ್ ಫಾಲ್ಕೆಯವರ ಜನ್ಮ ದಿನಾಚರಣೆಯನ್ನು ಏಪ್ರಿಲ್ 30ರಂದು ಆಚರಣೆ ಮಾಡಲಾಗುತ್ತದೆ, ಇವರ ಪೂರ್ಣ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. * ದಾದಾ ಸಾಹೇಬ್ ಅವರು 15ನೇ ವಯಸ್ಸಿನಲ್ಲಿ ಮುಂಬೈನ ಜೆ.ಜೆ ಸ್ಕೂಲ್ ಆಫ್ ಆರ್ಟ್ಗೆ ಸೇರಿ ಅಲ್ಲಿನ ಶಿಲ್ಪಕಲೆ, ಚಿತ್ರಕಲೆ, ಫೋಟೋಗ್ರಫಿ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದ್ದರು. * ದಾದಾ ಸಾಹೇಬ್ ಫಾಲ್ಕೆ ಅವರು ಭಾರತೀಯ ಚಿತ್ರರಂಗದ ನಿರ್ಮಾಪಕರಾಗಿ, ನಿರ್ದೇಶದಕರಾಗಿ, ಚಿತ್ರಕಥೆಗಾರರಾಗಿ ಭಾರತೀಯ ಚಿತ್ರರಂಗವನ್ನು ಹುಟ್ಟುಹಾಕಿದ್ದಾರೆ. * ದಾದಾ ಸಾಹೇಬ್ ಫಾಲ್ಕೆಅವರ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ರಾಜ ಹರಿಶ್ಚಂದ್ರ ಚಿತ್ರವನ್ನು ನಿರ್ಮಿಸಿದ್ದಾರೆ, ಹಾಗೂ ಈ ಸಿನಿಮಾವನ್ನು ಭಾರತದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಚಿತ್ರ ಎಂದು ಹೇಳಲಾಗುತ್ತದೆ. * ದಾದಾ ಸಾಹೇಬ ಫಾಲ್ಕೆ ಅವರು ಒಟ್ಟಾರೆ 95 ಸಿನಿಮಾಗಳು ಹಾಗೂ 27 ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. * ಭಾರತೀಯ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಸಿನಿಮಾ ರಂಗದ ಕಲಾವಿದರಿಗೆ ಇವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. * ಕನ್ನಡದ ಸಿನಿಮಾ ರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಡಾ.ರಾಜ್ ಕುಮಾರ್ ಅವರು 1995ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. * 1969ರಲ್ಲಿ ಪ್ರಥಮವಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದೇವಿಕಾ ರಾಣಿ ಅವರು ಪಡೆದು ಕೊಂಡಿದ್ದಾರೆ. * 2020ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಜನಿಕಾಂತ ಅವರು ಪಡೆದು ಕೊಂಡಿದ್ದಾರೆ.