Job Description: * ರಾಹುಲ್ ಬಜಾಜ್ ಅವರು ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30ರಂದು ರಾಜೀನಾಮೆ ನೀಡಲಿದ್ದಾರೆ ಎಂದು ಬಜಾಜ್ ಆಟೋ ಮಾಹಿತಿಯನ್ನು ನೀಡಿದೆ. * ರಾಹುಲ್ ಬಜಾಜ್ ಅವರು ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ, ಹಾಗೂ ಬಜಾಜ್ ಸಮೂಹದ ಅಧ್ಯಕ್ಷರು ಮತ್ತು ಸಂಸತ್ ಸದಸ್ಯರಾಗಿದ್ದಾರೆ. * 2001ರಲ್ಲಿ ಇವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಲಾಯಿತು. * 2008ರಲ್ಲಿ ಬಜಾಜ್ ಆಟೋವನ್ನು ಮೂರು ಘಟಕಗಳಾಗಿ ವಿಂಗಡಿಸಿದರು - ಬಜಾಜ್ ಆಟೋ, ಹಣಕಾಸು ಕಂಪನಿ ಬಜಾಜ್ ಫಿನ್ಸರ್ವ್ ಮತ್ತು ಹೋಲ್ಡಿಂಗ್ ಕಂಪನಿ, ಇದೀಗ ಅವರ ಮಕ್ಕಳು ಕಂಪನಿಯ ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. * ಮೇ 1 ರಂದು ನೀರಜ್ ಬಜಾಜ್ ಅವರು ನೂತನ ಅಧ್ಯಕ್ಷರಾಗಿ ಮತ್ತು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಬಜಾಜ್ ಆಟೋ ತಿಳಿಸಿದೆ. ರಾಹುಲ್ ಬಜಾಜ್ ರವರ ಬಗ್ಗೆ ಮಾಹಿತಿ : * ರಾಹುಲ್ ಬಜಾಜ್ ಭಾರತೀಯ ಬಿಲಿಯನೇರ್ ಉದ್ಯಮಿ. ಅವರು ಭಾರತೀಯ ಸಂಘಟಿತ ಬಜಾಜ್ ಸಮೂಹದ ಅಧ್ಯಕ್ಷರು ಮತ್ತು ಸಂಸತ್ ಸದಸ್ಯರಾಗಿದ್ದಾರೆ. 2001 ರಲ್ಲಿ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಲಾಯಿತು. * ಜನನ: 10 ಜೂನ್ 1938 (ವಯಸ್ಸು 82 ವರ್ಷ), ಕೋಲ್ಕತಾ * ನಿವ್ವಳ ಮೌಲ್ಯ: 630 ಕೋಟಿ ಯುಎಸ್ಡಿ (2021) ಫೋರ್ಬ್ಸ್ * ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ * ಶಿಕ್ಷಣ: ಹಾರ್ವರ್ಡ್ ಬಿಸಿನೆಸ್ ಸ್ಕೂಲ್ (1964)