Job Description: * ಭಾರತ ಮತ್ತು ಬ್ರಿಟನ್ ದೇಶಗಳ ನಡುವೆ ಸುಂಕ ಸಹಕಾರ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಕುರಿತ ಒಪ್ಪಂದಗಳಿಗೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. * ಈ ಒಪ್ಪಂದದಿಂದ ಸುಂಕ ಅಪರಾಧಗಳ ತಡೆಗಟ್ಟುವಿಕೆ ಮತ್ತು ತನಿಖೆ ನಡೆಸಲು, ದೇಶಗಳ ನಡುವೆ ವಹಿವಾಟು ನಡೆಸುವ ಸರಕುಗಳ ಮಾಹಿತಿಯನ್ನು ಪಡೆಯಲು ಈ ಒಪ್ಪಂದವು ಅನುಕೂಲವಾಗಲಿದೆ, ಪ್ರಸ್ತುತ ಎರಡೂ ಪಕ್ಷಗಳ ಅಧಿಕೃತ ಪ್ರತಿನಿಧಿಗಳು ಸಹಿ ಹಾಕಿದ ನಂತರ ಈ ಒಪ್ಪಂದಗಳು ಜಾರಿಗೆ ಬರಲಿವೆ ಎಂದು ತಿಳಿಸಿದರು. * ಭಾರತ ಮತ್ತು ಬ್ರಿಟನ್ ದೇಶಗಳ ಈ ಒಪ್ಪಂದವು ಭಾರತೀಯ ಸುಂಕ ಕಾಳಜಿ, ಕಸ್ಟಮ್ಸ್ ಮೌಲ್ಯದ ನಿಖರತೆ ಮತ್ತು ಉಭಯ ದೇಶಗಳ ಮಧ್ಯ ನಡೆಯುವ ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯಲು ಈ ಒಪ್ಪಂದವು ಉಪಯೋಗವಾಗಲಿದೆ ಎಂದು ಎರಡು ದೇಶಗಳು ತಿಳಿಸಿವೆ.