Job Description: * ಹಡಗಿನ ಮೇಲೆ 'ಧ್ರುವ್ ಎಂಕೆ 3' ಲಘು ಹೆಲಿಕಾಪ್ಟರ್ ಎಚ್ಎಎಲ್'ನಿಂದ ಪರೀಕ್ಷೆ ನಡೆಸಲಾಯಿತು. * ಧ್ರುವ್ ಎಂಕೆ 3ಯನ್ನು HAL ಅಭಿವೃದ್ಧಿಪಡಿಸಿದೆ, ಹಡಗಿನಲ್ಲಿ ಬ್ಲೇಡ್ಗಳನ್ನು ಮಡಚುವ ಮತ್ತು ಹ್ಯಾಂಗರ್ನೊಳಗೆ ನಿಲ್ಲುವ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶನ ಮಾಡಲಾಗಿದೆ. * ಭಾರತೀಯ ಕೋಸ್ಟ್ ಗಾರ್ಡ್ ಸಹಯೋಗದೊಂದಿಗೆ ಚೆನ್ನೈನ ಕಡಲ ತೀರದಲ್ಲಿ ಪರೀಕ್ಷೆಯನ್ನು ನಡೆಸಲಾಯಿತು ಎಂದು HAL ಮಾಹಿತಿ ನೀಡಿದೆ. * HAL ನಿಂದ ಭಾರತೀಯ ಕೋಸ್ಟ್ ಗಾರ್ಡ್ಗೆ ಧ್ರುವ್ ಎಂಕೆ 3 ಎಂಆರ್'ಅನ್ನು ಪೂರೈಸಲಾಯಿತು. * HAL ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ರವರು ನೀಡಿರುವ ಮಾಹಿತಿಯ ಪ್ರಕಾರ ಈ ಲಘು ಹೆಲಿಕಾಪ್ಟರ್'ನ್ನು ಹುಡುಕಾಟ ಮತ್ತು ರಕ್ಷಣೆ ಕಾರ್ಯಕ್ಕೆ ಬಳಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.