Job Description: * ಚೀನಾ ಬಾಹ್ಯಾಕಾಶ ಕೇಂದ್ರದ ಮೊದಲ ಮಾಡ್ಯೂಲ್ ಅನ್ನು ಬಿಡುಗಡೆ ಮಾಡಿದೆ, ಹೆಚ್ಚಿನ ಭಾಗಗಳನ್ನು ತರಲು ಮತ್ತು ಅವುಗಳನ್ನು ಕಕ್ಷೆಯಲ್ಲಿ ಜೋಡಿಸಲು ಸುಮಾರು 10 ಕಾರ್ಯಾಚರಣೆಗಳ ನಂತರ ಅಂದರೆ 2022 ರಲ್ಲಿ ಬಾಹ್ಯಾಕಾಶ ಕೇಂದ್ರವು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ನಿರೀಕ್ಷೆ ಪಟ್ಟಿದ್ದಾರೆ. * 2021ರ ಏಪ್ರಿಲ್ 29ರಂದು ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದ ವೆನ್ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ಕೇಂದ್ರದಿಂದ ಮಾರ್ಚ್ 5ಬಿ ರಾಕೆಟ್ ಬಳಸಿ ಚೀನಾ ತನ್ನ ಬಾಹ್ಯಾಕಾಶ ನಿಲ್ದಾಣದ ಪ್ರಮುಖ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ರವಾನಿಸಿದೆ. * ಚೀನಾ ಉಡಾವಣೆ ಮಾಡಿದ ಮೊದಲ ಮಾಡ್ಯೂಲ್'ನಿಂದ ಬಾಹ್ಯಾಕಾಶದಲ್ಲಿ ಶಾಶ್ವತ ಮಾನವ ಉಪಸ್ಥಿತಿಯನ್ನು ಕಾಯ್ದಿರಿಸಲು ಬೀಜಿಂಗ್ನ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. * ಚೀನಾ ದೇಶವು ಅಮೇರಿಕಾ ಮತ್ತು ರಷ್ಯಾದ ಜಾಗತಿಕ ಸ್ಥಿತಿಗೆ ಬೆಳೆಯಲು ಶತಕೋಟಿ ಡಾಲರ್'ಗಳನ್ನೂ ಬಾಹ್ಯಾಕಾಶ ಸಂಶೋಧನೆಗೆ ಖರ್ಚು ಮಾಡುತ್ತಿದೆ.