Job Description: * ಒಡಿಶಾ ಸರಕಾರವು ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ ಸಾವನ್ನಪ್ಪಿದರೆ ಆ ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವಾಗಿ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ. * ಒಡಿಶಾ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತುತ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಕೋವಿಡ್ ವಾರಿಯರ್ ಮೃತಪಟ್ಟರೆ ಈ ಕುಟುಂಬಕ್ಕೆ ಪರಿಹಾರವಾಗಿ 50 ಲಕ್ಷ ನೀಡುವದಾಗಿ ತಿಳಿಸಿದೆ. * ಈ 50 ಲಕ್ಷ ಪರಿಹಾರ ಧನವನ್ನು ಕೇಂದ್ರ ಸರ್ಕಾರ ನೀಡುವದಿಲ್ಲ ಅದರ ಪರವಾಗಿ ಒಡಿಶಾ ರಾಜ್ಯ ಸರಕಾರವು ನೀಡಲಿದೆ ಎಂದು ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಒಡಿಶಾ ಸರಕಾರ ಬಗ್ಗೆ ಮಾಹಿತಿ : * ಭಾರತದ ಇತರ ರಾಜ್ಯಗಳಂತೆ, ಒಡಿಶಾ ರಾಜ್ಯದ ಮುಖ್ಯಸ್ಥರು ರಾಜ್ಯಪಾಲರಾಗಿದ್ದು, ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. * ಒಡಿಶಾ ರಾಜ್ಯವನ್ನು ಲೋಕಸಭೆಯ 21 ಸಂಸತ್ತು ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 10 ಸಂಸತ್ತು ಸದಸ್ಯರು ಪ್ರತಿನಿಧಿಸುತ್ತಾರೆ. 21 ಲೋಕಸಭಾ ಕ್ಷೇತ್ರಗಳಿವೆ. * ರಾಜ್ಯಪಾಲ: ಗಣೇಶ ಲಾಲ್ * ಮುಖ್ಯಮಂತ್ರಿ :ನವೀನ್ ಪಟ್ನಾಯಕ್, (ಬಿಜೆಡಿ) * ಮುಖ್ಯ ಕಾರ್ಯದರ್ಶಿ : ಶ್ರೀ ಸುರೇಶ್ ಚಂದ್ರ ಮಹಾಪಾತ್ರ, ಐ.ಎ.ಎಸ್ * ಸ್ಪೀಕರ್ : ಸುರ್ಜ್ಯಾ ನಾರಾಯಣ್ ಪತ್ರೋ, * ಉಪ ಸ್ಪೀಕರ್: ರಜನಿ ಕಾಂತ್ ಸಿಂಗ್