Job Description: * ಕೇಂದ್ರ ಸರ್ಕಾರವು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ CEO ಹುದ್ದೆಯಲ್ಲಿರುವ ಅದಾರ್ ಪೂನಾವಾಲಾ ಅವರಿಗೆ 'ವೈ' ವರ್ಗದ ಭದ್ರತಾ (ಸೆಕ್ಯೂರಿಟಿ) ರಕ್ಷಣೆಯನ್ನು ನೀಡಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಧಿಸೂಚನೆಯಲ್ಲಿ ಮಾಹಿತಿಯನ್ನು ನೀಡಿದೆ. * ಪ್ರಸ್ತುತ 'ವೈ' ವರ್ಗದ ಭದ್ರತೆಯುಲ್ಲಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಗಳನ್ನೂ ಒಳಗೊಂಡಿರುತ್ತದೆ, ಒಟ್ಟಾರೆ 11 ಸಿಬ್ಬಂದಿಗಳನ್ನೂ ಇದು ಹೊಂದಿರುತ್ತದೆ. * ಅದಾರ್ ಪೂನಾವಾಲಾ ಅವರು ರಾಜ್ಯಗಳಿಗೆ ನೀಡುವ ಕೋವಿಡ್-19 ಔಷಧಿಗಳ ಬೆಲೆಯನ್ನು 400 ರಿಂದ 300 ರೂ.ಗೆ ಇಳಿಸಲಾಗುತ್ತದೆ ಹಾಗೂ ಇದು ಈ ಕ್ಷಣದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬಗ್ಗೆ ಮಾಹಿತಿ : * ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತೀಯ ಜೈವಿಕ ತಂತ್ರಜ್ಞಾನ ಕಂಪನಿಯಾಗಿದೆ. * ಇದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾಗಿದೆ. ಇದು ಭಾರತದ ಮಹಾರಾಷ್ಟ್ರದ ಪುಣೆ ನಗರದಲ್ಲಿದೆ ಮತ್ತು ಇದನ್ನು ಸೈರಸ್ ಪೂನವಾಲ್ಲಾ 1966 ರಲ್ಲಿ ಸ್ಥಾಪಿಸಿದರು. * ಈ ಕಂಪನಿಯು ಪೂನವಾಲ್ಲಾ ಇನ್ವೆಸ್ಟ್ಮೆಂಟ್ ಮತ್ತು ಇಂಡಸ್ಟ್ರೀಸ್ನ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾಗಿದೆ. * ಸಿಇಒ: ಆದರ್ ಪೂನವಾಲ್ಲಾ (2011) * ಸ್ಥಾಪಕ: ಸೈರಸ್ ಎಸ್. ಪೂನವಾಲ್ಲಾ * ಸ್ಥಾಪನೆ: 1966 * ಪೋಷಕ ಸಂಸ್ಥೆ: ಪೂನವಾಲ್ಲಾ ಇನ್ವೆಸ್ಟ್ಮೆಂಟ್ಸ್ & ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್. ಅಂಗಸಂಸ್ಥೆಗಳು: ಬಿಲ್ಥೋವನ್ ಬಯೋಲಾಜಿಕಲ್ಸ್ ಬಿವಿ, ವಕ್ಜಿನ್ ಪ್ರೊಜೆಕ್ಟ್ ಮ್ಯಾನೇಜ್ಮೆಂಟ್ ಜಿಎಂಬಿಹೆಚ್