Job Description: * ಚಾಂಡ್ಲರ್ ಉತ್ತಮ ಆಡಳಿತ ಸೂಚ್ಯಂಕವನ್ನು 'ಚಾಂಡ್ಲರ್ ಇನ್ಸ್ಟಿಟ್ಯೂಟ್ ಆಫ್ ಗವರ್ನೆನ್ಸ್' ಬಿಡುಗಡೆ ಮಾಡಿದೆ, ಇದು ಸಿಂಗಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. * ಈ ಸೂಚ್ಯಂಕವನ್ನು ನಾಯಕತ್ವ ಮತ್ತು ಬಲವಾದ ಸಂಸ್ಥೆಗಳು, ಕಾನೂನುಗಳು ಹಾಗೂ ನೀತಿಗಳು, ಆರ್ಥಿಕವಾಗಿ ಜನರು ಬೆಳವಣಿಗೆ ಸಹಾಯ ಮಾಡುವುದು ಆಧರಿಸಿ ಚಾಂಡ್ಲರ್ ಉತ್ತಮ ಆಡಳಿತ ಸೂಚ್ಯಂಕವನ್ನು ತಯಾರಿಸಿದೆ. * ಪ್ರಸ್ತುತ 104 ದೇಶಗಳು ಚಾಂಡ್ಲರ್ ಉತ್ತಮ ಆಡಳಿತ ಸೂಚ್ಯಂಕದಲ್ಲಿ ಭಾಗಿಯಾಗಿದ್ದು ಅದರಲ್ಲಿ ಭಾರತವು 49 ನೇ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ. * ಚಾಂಡ್ಲರ್ ಉತ್ತಮ ಆಡಳಿತ ಸೂಚ್ಯಂಕದಲ್ಲಿ ಫಿನ್ಲ್ಯಾಂಡ್ ಅಗ್ರಸ್ಥಾನದಲ್ಲಿದೆ, ಮತ್ತು ನಂತರದ ಸ್ಥಾನಗಳಲ್ಲಿ ಸ್ವಿಟ್ಜರ್ಲೆಂಡ್, ಸಿಂಗಾಪುರ್, ನೆದರ್ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳು ಸೇರಿವೆ. * ಭಾರತದಲ್ಲಿ ಉತ್ತಮ ಆಡಳಿತ ದಿನವನ್ನು ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ.